ಮಲ್ಪೆ: ಮೇ 8 ರಂದು ಜಿಲ್ಲಾಮಟ್ಟದ ತುಳುನಾಡ ಗೊಬ್ಬುಲು- ತುಳುನಾಡ ಪರಿಕರಗಳ ಪ್ರದರ್ಶನ, ಆಹಾರ ಮೇಳ

ಮಲ್ಪೆ: ತುಳುಕೂಟ ಉಡುಪಿ, ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಜಿಲ್ಲೆ 318 ಸಿ, ಲಯನ್ಸ್ ಆ್ಯಂಡ್ ಲಿಯೋ ಕ್ಲಬ್ ಉಡುಪಿ- ಇಂದ್ರಾಳಿ ಇದರ ಜಂಟಿ ಆಶ್ರಯದಲ್ಲಿ ಉಡುಪಿ ಜಿಲ್ಲಾ ಮಟ್ಟದ ತುಳುನಾಡ ಗೊಬ್ಬುಲು-2022 ತುಳುನಾಡ ಸಂಗೀತ ಮತ್ತು ನೃತ್ಯ ಪ್ರದರ್ಶನವು ಮೇ 8 ರಂದು ಬೆಳಗ್ಗೆ 9 ಗಂಟೆಗೆ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದೆ ಎಂದು ತುಳುಕೂಟ ಉಡುಪಿ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

ಮಂಗಳವಾರ ನಗರದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು. ತುಳುನಾಡ ಪರಿಕರಗಳ ವಿಶೇಷ ಪ್ರದರ್ಶನ, ತಿಂಡಿ-ತಿನಿಸುಗಳ ಮೇಳವನ್ನು ಆಯೋಜಿಸಲಾಗಿದೆ. ತುಳುನಾಡಿನ ಕ್ರೀಡಾಕೂಟದಲ್ಲಿ ಭಾಗವಹಿಸುವುದಕ್ಕೆ ಉಡುಪಿ ಜಿಲ್ಲೆಯ ತುಳು ಭಾಷಿಗರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದರು.

ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ಮೇ 5 ರೊಳಗೆ ಹೆಸರು ನೋಂದಾಯಿಸಬೇಕು. ಹಗ್ಗಜಗ್ಗಾಟ, ಬೀಚ್ ವಾಲಿಬಾಲ್, ಕಬಡ್ಡಿ, ತ್ರೋಬಾಲ್, ಮಾನವ ಗೋಪುರ, ಮರಳು ಶಿಲ್ಪ, ವೈಯಕ್ತಿಕ ಸ್ಪರ್ಧೆಗಳಾದ ಪೊಕ್ಕು, ಸೊಪ್ಪಾಟ, ಪಾಲೆದ ಗೊಬ್ಬು, ಚೆನ್ನೆಮಣೆ, ತಪ್ಪಂಗಾಯಿ, ಮುಡಿ ಕಟ್ಟುವುದು, ತೆಂಗಿನ ಸೊಗೆ ಹೆಣೆಯುವುದು, ತೆಂಗಿನಕಾಯಿ ಸಿಪ್ಪೆ ತೆಗೆಯುವುದು ಮುಂತಾದ ಸ್ಪರ್ಧೆ ನಡೆಯಲಿದೆ .

ಸುದ್ದಿಗೋಷ್ಠಿಯಲ್ಲಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು, ಕೋಶಾಧಿಕಾರಿ ಚೈತನ್ಯ ಎಂ.ಜಿ., ಉಡುಪಿ-ಇಂದ್ರಾಳಿ ಲಯನ್ಸ್ ಕ್ಲಬ್ ಅಧ್ಯಕ್ಷ ಮನೋಹರ್ ಶೆಟ್ಟಿ ತೋನ್ಸೆ, ತುಳುಕೂಟದ ಗೌರವ ಸಲಹೆಗಾರ ಮೊಹಮ್ಮದ್ ಮೌಲಾ, ತುಳು ಗೊಬ್ಬುಲು ಸಂಚಾಲಕ ದಿವಾಕರ್ ಸನಿಲ್ ಉಪಸ್ಥಿತರಿದ್ದರು.