ಉಡುಪಿ: ಪರ್ಯಾಯ ಶ್ರೀ ಕ್ರಷ್ಣಾಪುರ ಮಠ ಉಡುಪಿ ಇದರ ಆಶ್ರಯದಲ್ಲಿ, ಶ್ರೀಮತಿ ಮೋಹಿನಿ ಭಟ್ ಮಂಜೇಶ್ವರ ಮತ್ತು ಶ್ರೀಮತಿ ಮಾಯಾ ಕಾಮತ್ ಈಶ್ವರ ನಗರ ಮಣಿಪಾಲ, ಶ್ರೀ ಮಹಾಮಾಯಾ ಭಜನಾ ಮಂಡಳಿ ಈಶ್ವರನಗರ ಮಣಿಪಾಲ, ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿ ಕರ್ವಾಲು, ಅಲೆವೂರು ಪರಿವರ್ತನಾ ಫೌಂಡೇಶನ್(ರಿ) ಮಣಿಪಾಲ ಇದರ ಸಹಯೋಗದೊಂದಿಗೆ ಆದಿತ್ಯವಾರದಂದು ಶ್ರೀಕೃಷ್ಣಮಠ ಆವರಣದ ರಾಜಾಂಗಣ ಜನಾರ್ದನತೀರ್ಥ ವೇದಿಕೆಯಲ್ಲಿ ರಾಜ್ಯ ಮಟ್ಟದ ಭಜನಾ ಕಮ್ಮಟವನ್ನು ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮವನ್ನು ದಿವಾನರಾದ ವರದರಾಜ್ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.
ವೇದಿಕೆಯಲ್ಲಿ ಶ್ರೀಮತಿ ಮಾಯಾ ಕಾಮತ್, ಮೋಹನ್ ಭಟ್, ಸುರೇಶ್ ಶೆಟ್ಟಿ ಗುರ್ಮೆ, ಐರೋಡಿ ಸಹನಾ ಶೀಲಾ ಪೈ, ವೀಣಾ ಶೆಟ್ಟಿ, ಯಶಪಾಲ್ ಸುವರ್ಣ, ಸವಿತಾ ಹರೀಶ್ ರಾಮ್, ಲೀಲಾಧರ್ ಶೆಟ್ಟಿ ಕಾಪು ಉಪಸ್ಥಿತರಿದ್ದರು.
ಎಮ್ ಎಸ್ ಗಿರಿಧರ್ ಬೆಂಗಳೂರು ಭಜನಾ ಕಮ್ಮಟ ನೆಡೆಸಿಕೊಟ್ಟರು. ಪರ್ಯಾಯ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿ ಹರಸಿದರು.
ದಾಸಸಿಂಚನದ ಮೂಲಕ ಸಾವಿರಕ್ಕೂ ಅಧಿಕ ಮನೆಗೆ ಭೇಟಿ ನೀಡಿ ಭಜನಾ ಕಾರ್ಯಕ್ರಮ ನಡೆಸಿದ್ದು, ಇದು ಸಾವಿರದ ಮೈಲಿಗಲ್ಲು ದಾಟಿದ ಸಂದರ್ಭದಲ್ಲಿ ಎಮ್ ಎಸ್ ಗಿರಿಧರ್ ಬೆಂಗಳೂರು ಮತ್ತು ಶ್ರೀಮತಿ ವಸುಧಾ ಗಿರಿಧರ್ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಿತು. ವಿಶೇಷ ಸಾಧನೆ ಗೈದ ಸಾಧಕರನ್ನು ಗೌರವಿಸಲಾಯಿತು. ಬಳಿಕ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ಹಾಗು ಕುಣಿತ ಭಜನೆ ನಡೆಯಿತು.
ಶ್ರೀಕಾಂತ್ ನಾಯಕ್ ಸ್ವಾಗತಿಸಿದರು, ಸವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು, ಶೋಭಾ ಶೆಟ್ಟಿ ವಂದಿಸಿದರು.