ಭಾರತೀಯ ರಿಸರ್ವ್ ಬ್ಯಾಂಕ್ನ ಗವರ್ನರ್ ಹುದ್ದೆಗೆ ಉರ್ಜಿತ್ ಪಟೇಲ್ ಅವರು ಸೋಮವಾರ ರಾಜೀನಾಮೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದ ತಕ್ಷಣ ಈ ಹುದ್ದೆ ತೊರೆಯುತ್ತಿರುವುದಾಗಿ ಅವರು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕ ಹಿತಾಸಕ್ತಿ ರಕ್ಷಣೆ ಉದ್ದೇಶಕ್ಕೆ ಕೆಲ ನಿರ್ದಿಷ್ಟ ಕ್ರಮಗಳನ್ನು ಕೈಗೊಳ್ಳಲು ಕೇಂದ್ರೀಯ ಬ್ಯಾಂಕ್ಗೆ ನಿರ್ದೇಶನ ನೀಡಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಈ ಹಿಂದೆ ಯಾವತ್ತೂ ಬಳಸದ ಆರ್ಬಿಐ ಕಾಯ್ದೆ 1934ರ ಸೆಕ್ಷನ್ 7 ಬಳಸುವ ಸಂಬಂಧ ಚರ್ಚೆಗೆ ಅಕ್ಟೋಬರ್ನಲ್ಲಿ ಚಾಲನೆ ನೀಡಿತ್ತು. ಆರ್ಬಿಐ ಬಳಿ ಇರುವ ಮೀಸಲು ನಿಧಿಯ ಕೆಲ ಭಾಗವನ್ನು ತನಗೆ ವರ್ಗಾಯಿಸಬೇಕು ಎಂದೂ ಸರ್ಕಾರ ಪಟ್ಟು ಹಿಡಿದಿತ್ತು. ಆದರೆ ಆರ್ಬಿಐ, ಕೇಂದ್ರದ ನಿಲುವಿಗೆ ಪ್ರತಿರೋಧ ಒಡ್ಡಿದೆ ಎಂದು ಮೂಲಗಳಿಂದ ಕಂಡುಬಂದಿದೆ ಇವೆ
ಉರ್ಜಿತ್ ಪಟೇಲ್ ಅವರನ್ನು 2016ರ ಸೆಪ್ಟೆಂಬರ್ ತಿಂಗಳಲ್ಲಿ ಆರ್ಬಿಐನ 24ನೇ ಗವರ್ನರ್ ಆಗಿ ಮೂರು ವರ್ಷಗಳ ಅಧಿಕಾರಾವಧಿಗೆ ನೇಮಿಸಲಾಗಿತ್ತು. ಅವರ ಅಧಿಕಾರಾವಧಿ ಇನ್ನೂ 9 ತಿಂಗಳು ಬಾಕಿ ಇವೆ.