Home » ಸಿಡಿಲು ಬಡಿದು ಯುವಕ ಮೃತ್ಯು
ಕಾರ್ಕಳ: ಸಿಡಿಲು ಬಡಿದು ಯುವಕನೋರ್ವ ಮೃತಪಟ್ಟ ಘಟನೆ ಕಾರ್ಕಳ ತಾಲೂಕಿನ ನೂರಾಲ್ ಬೆಟ್ಟು ಗ್ರಾಮದಲ್ಲಿ ಸೋಮವಾರ ನಡೆದಿದೆ.
ನೂರಾಲ್ ಬೆಟ್ಟುವಿನ ಜಾಣಮನೆ ನಿವಾಸಿ 41 ವರ್ಷದ ಜಿಗೀಶ್ ಜೈನ್ ಮೃತ ದುರ್ದೈವಿ.
ಜಿಗೀಶ್ ಮನೆಯಲ್ಲಿ ಇದ್ದ ವೇಳೆ ಸಿಡಿಲು ಬಡಿದಿದೆ ಎನ್ನಲಾಗಿದೆ. ಸಿಡಿಲಿನ ಹೊಡೆತಕ್ಕೆ ಜಿಗೀಶ್ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.