ಮಾಹೆ ವಿದ್ಯಾರ್ಥಿಗಳೊಂದಿಗೆ ಸಾಗರಿಕಾ ಘೋಷ್ ಸಂವಾದ

ಮಣಿಪಾಲ: “ನಮ್ಮ ಖಾಸಗಿ ಆಯ್ಕೆಯ ವಿಷಯಗಳಲ್ಲಿ ಯಾವುದೇ ಸರ್ಕಾರದ ಹಸ್ತಕ್ಷೇಪವನ್ನು ಪರಿಗಣಿಸದೆ ದೃಢವಾಗಿರುವ ಮೂಲಕ;ಸ್ವತಂತ್ರವಾಗಿ ಯೋಚಿಸಿ ಮತ್ತು ಕಾರ್ಯನಿರ್ವಹಿಸಿ” ಎಂದು ಖ್ಯಾತ ಲೇಖಕಿ-ಪತ್ರಕರ್ತೆ ಸಾಗರಿಕಾ ಘೋಷ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ವಿದ್ಯಾರ್ಥಿಗಳು ಏನನ್ನು ಧರಿಸಬೇಕು, ತಿನ್ನಬೇಕು, ಯೋಚಿಸಬೇಕು ಮತ್ತು ಹೇಗೆ ವರ್ತಿಸಬೇಕು ಹೀಗೆ ಅವರ ಅಗತ್ಯವನ್ನು ಸರ್ಕಾರ ನಿರ್ಧರಿಸಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಶನಿವಾರ ಮಾಹೆಯ ಗಾಂಧೀಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ‘ವೈ ಐ ಆಮ್ ಎ ಲಿಬರಲ್’ ಪುಸ್ತಕದ ಲೇಖಕಿ ಸಾಗರಿಕಾ ಘೋಷ್, ವಿದ್ಯಾರ್ಥಿಗಳು ಸಂವಿಧಾನದಲ್ಲಿ ಪ್ರತಿಷ್ಠಾಪಿಸಿರುವ ಎಲ್ಲ ವಿಧದ ಸ್ವಾತಂತ್ರ್ಯಗಳನ್ನೂ ಸರ್ಕಾರದ ಯಾವುದೇ ಹಸ್ತಕ್ಷೇಪದ ವಿರುದ್ಧ ಎಚ್ಚರಿಕೆಯಿಂದ ಕಾಪಾಡಬೇಕು. “ಇದೇ ನನ್ನ ಪುಸ್ತಕದ
ಆತ್ಮವಾಗಿದೆ ಮತ್ತು ಈ ವಿಚಾರವನ್ನು ನಾನು ಮಹಾತ್ಮ ಗಾಂಧಿಯವರಿಂದಲೇ ಪಡೆದುಕೊಂಡಿದ್ದೇನೆ. ಸತ್ಯಾಗ್ರಹಿ ಒಬ್ಬ ಆದರ್ಶ ಆದರ್ಶವಾದಿ” ಎಂದರು.

ಇಬ್ಬರು ದಿವಂಗತ ಪ್ರಧಾನ ಮಂತ್ರಿಗಳಾದ ಇಂದಿರಾ ಗಾಂಧಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಜೀವನಚರಿತ್ರೆಯನ್ನು ಬರೆದಿರುವ ಸಾಗರಿಕಾ, ಜೀವನಚರಿತ್ರೆಯ ಬರವಣಿಗೆಯ ಅವರ ವಿಧಾನವು ಕಾಲ್ಪನಿಕ ಸ್ವರೂಪದಲ್ಲಿ ವಾಸ್ತವ ಘಟನೆಗಳನ್ನು ತೆರೆದಿಡುವುದಾಗಿದೆ ಎಂದು ಹೇಳಿದ ಅವರು ತಮ್ಮ ಪುಸ್ತಕಗಳಿಂದ ಕೆಲವು ಆಯ್ದ ಭಾಗಗಳನ್ನು ಓದಿದರು.

ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ವ್ಯಾಪಕ ಅನುಭವ ಹೊಂದಿರುವ ಸಾಗರಿಕಾ, ಮಾಧ್ಯಮ ರಂಗವು ತಾಂತ್ರಿಕವಾಗಿ ಬದಲಾಗುತ್ತಿರುವಾಗ ಈ ಸಂದರ್ಭದಲ್ಲಿ, ಮೌಲ್ಯಗಳು ಅಪಾಯದಲ್ಲಿದೆ ಮತ್ತು ಇದನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ ಎಂದರು.

ಸಾಗರಿಕಾ ಅವರ ಸೃಜನಶೀಲತೆ ಪತ್ರಿಕೋದ್ಯಮ, ಕಾದಂಬರಿ ಮತ್ತು ಜೀವನಚರಿತ್ರೆಯಂತಹ ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಗೊಂಡಿದೆ ಎಂದು ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಉಲ್ಲೇಖಿಸಿದರು.