ಲಯನ್ಸ್ ಕ್ಲಬ್ ಹಿರಿಯಡ್ಕ ಪ್ರಾಂತೀಯ ಅಧ್ಯಕ್ಷ, ಮೊದಲ ಮತ್ತು ದ್ವಿತೀಯ ಉಪ ಗವರ್ನರ್ ಗಳ ಭೇಟಿ

 

ಉಡುಪಿ: ಆದಿತ್ಯವಾರದಂದು ಲಯನ್ಸ್ ಕ್ಲಬ್ ಹಿರಿಯಡ್ಕದಲ್ಲಿ ಲಯನ್ಸ್ ಪ್ರಾಂತೀಯ ಅಧ್ಯಕ್ಷ ಶಂಕರ್ ಶೆಟ್ಟಿ ಮತ್ತು ಮೊದಲ ಉಪ ಗವರ್ನರ್ ಎಮ್ ಕೆ ಭಟ್ ಮತ್ತು ದ್ವಿತೀಯ ಉಪ ಗವರ್ನರ್ ಡಾ. ನೇರಿ ಕರ್ನಿಲೀಯೋ ಭೇಟಿ ನೀಡಿ ಕ್ಲಬ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಲಬ್ ನ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ ಪಡ್ದಮ್ ವಹಿಸಿದ್ದರು. ಹಿರಿಯಡ್ಕದ ನಾರಾಯಣಗುರು ಸಭಾಂಗಣದಲ್ಲಿ ಕಾರ್ಯಕ್ರಮವು ಸರಳ ರೀತಿಯಲ್ಲಿ ಜರುಗಿತು.

ಸದಸ್ಯರಾದ ವಸಂತ್ ಶೆಟ್ಟಿ ಪ್ರಸಕ್ತ ವರ್ಷದ ಸೇವಾ ಚಟುವಟಿಕೆಗಳ ಮಾಹಿತಿಯನ್ನು ವಾಚಿಸಿದರು.

ಪೂರ್ಣಿಮ ಶೆಟ್ಟಿ ಪ್ರಾರ್ಥಿಸಿದರು. ಸದಸ್ಯ ರವೀಂದ್ರ ಹೆಗ್ಡೆ ಧ್ವಜ ವಂದನೆ ಮಾಡಿದರು. ಸತ್ಯಾನಂದ ನಾಯಕ್ ಅತ್ರಾಡಿ ವಂದಿಸಿದರು.

ವೇದಿಕೆಯಲ್ಲಿ ಪ್ರಾಂತೀಯ ಸಲಹೆಗಾರ ಉದಯ ಹೆಗ್ಡೆ, ವಲಯಾಧ್ಯಕ್ಷ ರೋಹಿತ್ ಶೆಟ್ಟಿ, ಕ್ಲಬ್ ನ ಕೋಶಾಧಿಕಾರಿ ಹರೀಶ್ ಹೆಗ್ಡೆ, ಲಯನ್ಸ್ ಹರ್ಷದ ಕೋಶಾಧಿಕಾರಿ ಪೂರ್ಣಿಮಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಅತಿಥಿಗಳನ್ನು ಸನ್ಮಾನಿಸಲಾಯಿತು.