ಇನ್ಮುಂದೆ ಇದನ್ನು ಹೊಂದಿಲ್ಲದಿದ್ದರೆ ದ್ವಿಚಕ್ರ ಸವಾರರಿಗೆ ಭಾರೀ ದಂಡ ಬೀಳುವುದು ಗ್ಯಾರಂಟಿ.!

ಬೆಂಗಳೂರು: ವಾಹನ ಅಪಘಾತಗಳಿಗೆ ಕಡಿವಾಣ ಹಾಕಲು ಸಂಚಾರ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದು, ಇನ್ಮುಂದೆ ದ್ವಿಚಕ್ರ ವಾಹನಗಳಿಗೆ ಎರಡು ಕಡೆ ಮಿರರ್ ಹಾಗೂ ಇಂಡಿಕೇಟರ್ ಇಲ್ಲದೆ ಹೊದರೆ 500 ರೂ. ದಂಡ ಫಿಕ್ಸ್ ಆಗಿದೆ. ಈ ಕುರಿತು ಮಾಹಿತಿ ನೀಡಿರುವ ಜಂಟಿ ಆಯುಕ್ತ (ಸಂಚಾರ) ಡಾ.ಬಿ.ಆರ್. ರವಿಕಾಂತೇಗೌಡ, ಸಂಭವಿಸುತ್ತಿರುವ ಅಪಘತಗಳಲ್ಲಿ ಹೆಚ್ಚಿನದಾಗಿ ದ್ಚಿಚಕ್ರ ವಾಹನಗಳೇ ತುತ್ತಾಗುತ್ತಿದೆ.

ಮರಣ ಪ್ರಮಾಣದಲ್ಲಿ ಸಹ ದ್ವಿಚಕ್ರ ಸವಾರರ ಸಾವಿನ ಪ್ರಮಾಣವೇ ಅಧಿಕವಾಗಿದೆ. ಈ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನಗಳಿಗೆ 2 ಕಡೆ ಮಿರರ್ ಹಾಗೂ ಇಂಡಿಕೇಟರ್ ಕಡ್ಡಾಯಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.