ಕಾರ್ಕಳ: ಕಾರ್ಕಳ ಮರ್ಣೆ ಗ್ರಾಮದ ಕಾಡುಹೊಳೆ ಸಚ್ಚಿದಾನಂದ ಪ್ರಭು ಅವರು ಭಾರತದ ರಕ್ಷಣಾ ಇಲಾಖೆಯ ಬ್ರಿಗೇಡಿಯರ್ ಹುದ್ದೆ ಅಲಂಕರಿಸಿದ್ದಾರೆ.
ಸಚ್ಚಿದಾನಂದ ಪ್ರಭು ಅವರು ಕಾಡುಹೊಳೆ ಕೊಪ್ಪಲದ ದಿ. ಬಾಬುರಾಯ ಪ್ರಭು, ರತ್ನಮ್ಮ ದಂಪತಿಯವರ ಪುತ್ರ, ಬೈಲೂರು ಜ್ಯೋತಿ ಪ್ರಭು ಇವರ ಪತ್ನಿಯಾಗಿದ್ದ ಇವರು ಪ್ರಾಥಮಿಕ ಶಿಕ್ಷಣವನ್ನು ಮರ್ಣೆ ಗ್ರಾಮದ ಕಾಡುಹೊಳೆಯಲ್ಲಿ, ಅಜೆಕಾರು ಜ್ಯೋತಿ ಶಾಲೆಯಲ್ಲಿ ಪ್ರೌಢಶಿಕ್ಷಣವನ್ನು, ಎಸ್ಡಿಎಂ ಉಜಿರೆಯಲ್ಲಿ ಪಿಯು ಶಿಕ್ಷಣವನಗನ್ನು ಪೂರೈಸಿದ ಪ್ರಭು ಅವರು ಉಡುಪಿ ವೈಕುಂಠ ಬಾಳಿಗಾ ಕಾಲೇಜಿನಲ್ಲಿ ಎಲ್ಎಲ್ಬಿ ಪದವಿ ಪಡೆದಿದ್ದರು.
1997ರಲ್ಲಿ ಭಾರತೀಯ ಭೂಸೇನೆಯಲ್ಲಿ ಅಸಿಸ್ಟೆಂಟ್ ಜಡ್ಜ್ ಅಡ್ವೊಕೇಟ್ ಜನರಲ್ ಹುದ್ದೆಗೆ ನೇಮಕಗೊಂಡ ಇವರು ಬಳಿಕ ಕರ್ನಲ್ ಮಿಲಿಟರಿ ಸೆಕ್ರೆಟರಿ (ಕಾನೂನು), ಡೆಪ್ಯೂಟಿ ಜಡ್ಜ್ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿರುತ್ತಾರೆ.
ಸಚ್ಚಿದಾನಂದ ಪ್ರಭು ಅವರು ಇದೀಗ ಪದೋನ್ನತಿ ಪೂರೈಸಿ ಭಾರತೀಯ ಭೂಸೇನೆಯ ನ್ಯಾಯಾಂಗ ವಿಭಾಗದಲ್ಲಿ ಬ್ರಿಗೇಡಿಯರ್ ಪದವಿ ಪಡೆದ ಮೊದಲ ಕನ್ನಡಿಗರೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.