ನಗರದ ಲಾಡ್ಜ್ ನಲ್ಲಿ ಮಲಗಿರುವ ಸ್ಥಿತಿಯಲ್ಲಿ ಸಂತೋಷ್ ಪಾಟೀಲ್ ಮೃತದೇಹ ಪತ್ತೆ; ಕೇಸರಿ ಶಾಲು ಹಾಕಿಕೊಂಡೇ ಪ್ರಾಣತ್ಯಾಗ

ಉಡುಪಿ: ಸಚಿವ ಈಶ್ವರಪ್ಪ ಅವರ ಮೇಲೆ ಕಮಿಷನ್ ಆರೋಪ ಹೊರಿಸಿದ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿದ್ದು, ಕೇಸರಿ ಶಾಲು ಹಾಕಿಕೊಂಡೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಆತನ ಮೃತದೇಹ ಪತ್ತೆಯಾಗಿದೆ.

ಮೃತನ ಸಂಬಂಧಿಕರು ಉಡುಪಿಗೆ ಆಗಮಿಸಿದ ಬಳಿಕ ಕಾನೂನು ಪ್ರಕ್ರಿಯೆ ಆರಂಭಗೊಂಡಿದೆ. ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡಿರುವ ನಗರದ ಲಾಡ್ಜ್ ನ ಕೊಠಡಿ ಸಂಖ್ಯೆ 207 ರ ಬಾಗಿಲು ತೆರೆಯಲಾಯಿತು.

ಈ ವೇಳೆ ಹಾಸಿಗೆ ಮೇಲೆ ಮಲಗಿರುವಂತೆ ಸಂತೋಷ್ ಪಾಟೀಲ್ ಮೃತದೇಹ ಕಂಡುಬಂದಿದೆ. ಹಸಿರು ಶರ್ಟ್ ಮತ್ತು ರೆಗ್ಯೂಲರ್ ಪ್ಯಾಂಟ್ ಜೊತೆಗೆ ಕೇಸರಿ ಶಾಲು ಹಾಕಿದ ಸ್ಥಿತಿಯಲ್ಲಿ ಮೃತದೇಹವಿದೆ. ಅಲ್ಲದೆ ಕೋಣೆಯ ಡಸ್ಟ್ ಬಿನ್ ನಲ್ಲಿ ವಿಷದ ಬಾಟಲಿ ತರದ ಡಬ್ಬಿ ಪತ್ತೆಯಾಗಿದೆ.