ಕುಕ್ಕಿಕಟ್ಟೆ: ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟನೆ

ಉಡುಪಿ: ಹಿಂದು ಜಾಗರಣಾ ವೇದಿಕೆ ಹಾಗೂ ಬೊಬ್ಬರ್ಯ ಫ್ರೇಂಡ್ಸ್ ಬೆಳ್ಳಂಪಳ್ಳಿ ಕುಕ್ಕಿಕಟ್ಟೆ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ,ಗ್ರಾಮ ವಿಕಾಸ ಸಮಿತಿ ಹಾವಂಜೆ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ಎ.10 ಆದಿತ್ಯವಾರ ವಿಶ್ವಕರ್ಮ ಸಭಾಭವನ‌ ಕುಕ್ಕಿಕಟ್ಟೆ ಸಭಾಭವನದಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಕುಕ್ಕೆಹಳ್ಳಿ ಗ್ರಾಮ ಪಂಚಯತ್ ಅಧ್ಯಕ್ಷರಾದ ಪುರಂದರ ಕೋಟ್ಯಾನ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಹಲವು ವರ್ಷಗಳಿಂದ ನಮ್ಮ ಗ್ರಾಮದಲ್ಲಿ ಹಿಂದು ಜಾರಗರಣಾ ವೇದಿಕೆ ವಿವಿಧ ಸಂಘಟನೆಗಳ ಸಹಕಾರದಲ್ಲಿ ಹತ್ತು ಹಲವು ಸಮಾಜಮುಖಿ ಕಾರ್ಯಕ್ರಮವನ್ನು ಆಯೋಜನೆ ಮಾಡುತ್ತಾ ಬಂದಿದ್ದು, ಇದೀಗ ಕಳೆದ 2 ವರ್ಷಗಳಿಂದ ಈ ಭಾಗದ ಯುವಕರನ್ನು ಒಗ್ಗೂಡಿ ರಕ್ತದಾನ ಶಿಬಿರವನ್ನು ಆಯೋಜಿಸಿ ರಕ್ತದಾನಕ್ಕೆ ಪ್ರೇರಣೆ ನೀಡಿತ್ತಾ ಬರುತ್ತಿರುವುದು ಶ್ಲಾಘನೀಯ ಇಂತಹ ಮಾದರಿಯ ಕಾರ್ಯ ನಿರಂತರ ನಮ್ಮ ಗ್ರಾಮದಲ್ಲಿ ಹೀಗೆಯ ಮುಂದುವರಿಯಲಿ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಸತ್ಯನಾರಾಯಣ ಆಚಾರ್ಯ ಅಧ್ಯಕ್ಷರು ಗ್ರಾಮ ವಿಕಾಸ ಸಮಿತಿ ಹಾವಂಜೆ, ಜಯನಂದ ನಾಯಕ್ ಗ್ರಾಮ‌ಪಂಚಾಯತ್ ಸದಸ್ಯರು ಕುಕ್ಕೆಹಳ್ಳಿ, ಡಾ ಆಸ್ನಾ ವೈದ್ಯರು ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ, ಉಮೇಶ್ ಶೆಟ್ಟಿ ಪ್ರಧಾನ ಕಾರ್ಯದರ್ಶಿ ಹಿಂದು ಜಾಗರಣ ವೇದಿಕೆ ಉಡುಪಿ ವಲಯ ರಕ್ತದ ಆಪತ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ್ ಅಧ್ಯಕ್ಷರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ (ರಿ) ಉಡುಪಿ, ಅಜಿತ್ ಹಾವಂಜೆ ,ಪ್ರಕಾಶ್ ಕುಕ್ಕೆಹಳ್ಳಿ ಉಪಸ್ಥಿತ್ತರಿದ್ದರು.ರಾಜೇಶ್ ಕುಕ್ಕಿಕಟ್ಟೆ ಸ್ವಾಗತಿಸಿದರು ವಿವೇಕ್ ಕುಕ್ಕಿಕಟ್ಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದ ಅರ್ಪಿಸಿದರು.