ಮಣಿಪಾಲ: ಇತ್ತೀಚಿನ ಟಿ.ವಿ, ಮೊಬೈಲ್ ಹಾಗೂ ಇಂಟರ್ನೆಟ್ ಆಕರ್ಷಣೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಮಕ್ಕಳಲ್ಲಿ ಶಾರೀರಿಕ ಶ್ರಮದ ಬಗ್ಗೆ ಅರಿವೇ ಇಲ್ಲದಂತಾಗಿದೆ. ಇದನ್ನೆಲ್ಲ ತಪ್ಪಿಸುವ ಸಲುವಾಗಿ ಮಣಿಪಾಲದ ಶ್ರೀ ಶಾರದಾ ಇನ್ಸ್ಟಿಟ್ಯೂಟ್ನಲ್ಲಿ ಎಪ್ರಿಲ್ 11 ರಿಂದ ಎಪ್ರಿಲ್ 23ರ ವರೆಗೆ 8 ರಿಂದ 13 ವರ್ಷದ ಒಳಗಿನ ಮಕ್ಕಳಿಗೆ ಚಿಣ್ಣರ ಜಾಗರ ಬೇಸಿಗೆ ಶಿಬಿರವನ್ನು ಏರ್ಪಡಿಸಲಾಗಿದೆ.
ಈ ಶಿಬಿರವು ಕಥೆ, ಪ್ರಹಸನ, ಡಾನ್ಸ್, ಮುಖವಾಡ ಹಾಗೂ ಕ್ರಾಫ್ಟ್ ತಯಾರಿಕೆ, ಚಿತ್ರಕಲೆ, ಬ್ರೈನ್ ಟ್ರೈನ್, ಆಟೋಟ ಹಾಗೂ ಇನ್ನಿತರ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ತರಬೇತಿಯ ಸಲಕರಣೆಗಳನ್ನು ನೀಡಲಾಗುವುದು. ಆಸಕ್ತರು ಮುಂಚಿತವಾಗಿ ತಮ್ಮ ಹೆಸರನ್ನು ನೋಂದಾಯಿಸಲು ಶ್ರೀ ಶಾರದಾ ಇನ್ಸ್ಟಿಟ್ಯೂಟ್, ಡಿ.ಸಿ. ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್ ಕಾಂಪ್ಲೆಕ್ಸ್, 1ನೇ ಮಹಡಿಯಲ್ಲಿರುವ ಸಂಸ್ಥೆಯ ಸಂಯೋಜಕಿ ಸುನೀತಾ ಅವರನ್ನು ಸಂಪರ್ಕಿಸುವಂತೆ (9901722527) ಸಂಸ್ಥೆಯು ಪ್ರಕಟನೆ ತಿಳಿಸಿರುತ್ತದೆ.