ಉಡುಪಿ: ರಾಜ್ಯ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತಿರುವ ಇಂದಿರಾಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ಅಂಗವಿಕಲ ವೇತನ, ನಿರ್ಗತಿಕ ವಿಧವಾ ವೇತನ, ಮೈತ್ರಿ ಯೋಜನೆ ಹಾಗೂ ಮನಸ್ವಿನಿ ಯೋಜನೆಗಳಿಗೆ ಸಂಬಂಧಿಸಿದಂತೆ, ಉಡುಪಿ ತಾಲೂಕು ಹೋಬಳಿಯ ಕಂದಾಯ ಗ್ರಾಮಗಳ ಪಿಂಚಣಿ ಅದಾಲತ್ ಕಾರ್ಯಕ್ರಮವು ಏಪ್ರಿಲ್ 12 ರಂದು ಬೆಳಗ್ಗೆ 11.30 ಕ್ಕೆ ಉಡುಪಿ ತಾಲೂಕು ಕಚೇರಿಯಲ್ಲಿ, ಕುಂದಾಪುರ ಸಹಾಯಕ ಕಮೀಷನರ್ ಕೆ. ರಾಜು ಇವರ ಉಪಸ್ಥಿತಿಯಲ್ಲಿ ನಡೆಯಲಿದೆ.
ಪಿಂಚಣಿ ಸೌಲಭ್ಯ ಪಡೆಯಲು ಇಚ್ಛಿಸುವವರು ಅಥವಾ ಈಗಾಗಲೇ ಅರ್ಜಿ ಸಲ್ಲಿಸಿ ಕೋರಿಕೆ ತಿರಸ್ಕೃತಗೊಂಡಿರುವವರು ಆಧಾರ್ ಕಾರ್ಡ್, ಪಿಂಚಣಿ ಚೀಟಿ, ಪಡಿತರ ಚೀಟಿ ನಕಲು ಪ್ರತಿ, ವಯಸ್ಸಿನ ಕುರಿತು ದಾಖಲೆ ಹಾಗೂ ಸೂಕ್ತ ದಾಖಲೆಗಳೊಂದಿಗೆ ಸದ್ರಿ ಅದಾಲತ್ನಲ್ಲಿ ಹಾಜರಾಗಿ ಪರಿಹಾರ ಪಡೆದುಕೊಳ್ಳುವಂತೆ ಉಡುಪಿ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.