ಕಾರ್ಕಳ: ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆಂದು ಬೆಳ್ಮಣ್ ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲರಿಗೆ ಹುಸಿ ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬೆಳ್ಮಣ್ ಸರಕಾರಿ ಪ.ಪೂ ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯ ಮಾ.30 ಬೆಳಿಗ್ಗೆ 11:52ಕ್ಕೆ ತಮ್ಮ ಕೊಠಡಿಯಲ್ಲಿ ಕರ್ತವ್ಯ ನಿರ್ವಹಿಸಿಕೊಂಡಿರುವಾಗ ಅಪರಿಚಿತ ಮಹಿಳೆಯಿಂದ ಕರೆ ಬಂದಿದ್ದು, ತಾನು ಪಿ.ಯು. ಮಂಡಳಿಯ ಪರೀಕ್ಷಾ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿದ್ದಾಳೆ.
ಅಲ್ಲದೆ, ಮಾ. 31ರಂದು ನಡೆಯುವ ಬಯೋಲಜಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಉಳಿದ ಇಂಗ್ಲೀಷ್, ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆ ಕೂಡಾ ಬಯಲಾಗಿದೆ. ನಿಮ್ಮಲ್ಲಿ ಇರಿಸಲಾದ ಪ್ರಶ್ನೆ ಪತ್ರಿಕೆಗಳನ್ನು ಕ್ರಾಸ್ ಚಕ್ ಮಾಡಲು ಈ ನಂಬರಿಗೆ Whatsapp ಮಾಡುವಂತೆ ತಿಳಿಸಿದ್ದಾಳೆ.
ಆಗ ಮಯ್ಯ ಅವರು ಕರೆ ಮಾಡಿದ ಮಹಿಳೆಯ ಹೆಸರು ವಿಚಾರಿಸಿದ್ದಾರೆ. ಆದ್ರೆ ತನ್ನ ಹೆಸರನ್ನು ಹೇಳದೆ ಪೋನ ಕರೆಯನ್ನು ಕಟ್ ಮಾಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ