ಮಣಿಪಾಲ: ಅನಾರೋಗ್ಯದಿಂದ ಬೇಸತ್ತ ವ್ಯಕ್ತಿಯೊಬ್ಬರು ಮನೆಯ ಮಾಡಿನ ಕಬ್ಬಿಣಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲ ಶಿವಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಶಿವಳ್ಳಿ ಗ್ರಾಮದ ರಾಮಚಂದ್ರ ಭಟ್ ಎಂದು ಗುರುತಿಸಲಾಗಿದೆ. ಇವರು ಡೆತ್ ನೋಟ್ ಬರೆದಿಟ್ಟು ಏ.1ರ ಬೆಳಗ್ಗಿನ ಜಾವ 2 ಗಂಟೆ ಸುಮಾರಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಾಯುವ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ “ನಾನು ಅನಾರೋಗ್ಯದಿಂದ ಜೀವನದಲ್ಲಿ ಬೇಸರಗೊಂಡು ವೈರಾಗ್ಯ ತಾಳಿ ಆತ್ಮಹತ್ಯೆ ಮಾಡಿಕೊಂಡಿರುತ್ತೇನೆ. ಇದಕ್ಕೆ ಬೇರೆ ಯಾರು ಕಾರಣರಲ್ಲ. ಆರಕ್ಷಕ ಅಧಿಕಾರಿಗಳಲ್ಲಿ ವಿನಂತಿ ದಯಮಾಡಿ ಕೇಸು ಬುಕ್ ಮಾಡಿ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ ಎಂದು ಬರೆದು ಸಹಿ ಮಾಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.