ಕೊಲ್ಲೂರು: ವ್ಯಕ್ತಿ ನಾಪತ್ತೆ

ಬೈಂದೂರು: ಬೈಂದೂರು ತಾಲೂಕು ಕೊಲ್ಲೂರು ಗ್ರಾಮದ ನಿವಾಸಿ ತುಕಾರಾಮ ಶೆಟ್ಟಿಗಾರ್ (52 ವರ್ಷ) ಎಂಬುವರು ಮಾರ್ಚ್ 29 ರಂದು ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಬಳಿ ಯಕ್ಷಗಾನ ನೋಡಲು ಹೋದವರು ವಾಪಾಸು ಮನೆಗೆ ಬಾರದೇ ನಾಪತ್ತೆಯಾಗಿರುತ್ತಾರೆ.

5 ಅಡಿ 2 ಇಂಚು ಎತ್ತರ, ಗೋಧಿ ಮೈ ಬಣ್ಣ, ಸಾಧಾರಣ ಶರೀರ, ಹೊಂದಿದ್ದು, ಕನ್ನಡ, ತುಳು ಮಲೆಯಾಳಿ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೊಲ್ಲೂರು ಪೋಲೀಸ್ ಠಾಣೆ ದೂ.ಸಂಖ್ಯೆ: 08254-258233, ಮೊ.ನಂ: 9480805460, ಬೈಂದೂರು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 08254-251031, ಮೊ.ನಂ: 9480805434, ಕಂಟ್ರೋಲ್ ರೂಂ 100 (0820-2526444) ಅನ್ನು ಸಂಪರ್ಕಿಸುವಂತೆ ಕೊಲ್ಲೂರು ಪೋಲೀಸ್ ಠಾಣೆಯ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.