ನವದೆಹಲಿ: ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೋಡಣೆ ಮಾಡಲು ಈ ವರ್ಷದ ಮಾರ್ಚ್ 31 ಕೊನೆಯ ದಿನವಾಗಲಿದೆ.
ಬರುವ ಮಾ. 31 ರೊಳಗೆ ಆಧಾರ್ ಕಾರ್ಡ್ ಗೆ ಪಾನ್ ನಂಬರ್ ಜೋಡಣೆ ಮಾಡದಿದ್ದರೆ, ಪಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.
ಅದಲ್ಲದೆ ಆದಾಯ ತೆರಿಗೆ ಕಾಯ್ದೆ ಪ್ರಕಾರ, ದಂಡವನ್ನು ವಿಧಿಸಲಾಗುವುದು ಎಂದು ಇಲಾಖೆ ತಿಳಿಸಿದೆ.












