ಉಡುಪಿ: ಆಂಧ್ರ ವಿಶ್ವವಿದ್ಯಾಲಯವು ಕೇಂದ್ರ ಸೈನಿಕ ಮಂಡಳಿಯ ಎಂ.ಓ.ಯು ದೊಂದಿಗೆ ಮಾಜಿ ಸೈನಿಕರಿಗೆ ನೀಡಲಾಗುವ ಬಿ.ಎ (ಹೆಚ್.ಆರ್.ಎಂ) ಪ್ರಮಾಣ ಪತ್ರಕ್ಕಾಗಿ ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶನಾಲಯದ ವತಿಯಿಂದ ಮೇ 4 ನೇ ವಾರ ಹಾಗೂ ನವೆಂಬರ್ 4 ನೇ ವಾರದಲ್ಲಿ ಪರೀಕ್ಷೆಯನ್ನು ನಡೆಸಲಾಗುವುದು.
ಮಾಜಿ ಸೈನಿಕರು ಅರ್ಜಿ ನಮೂನೆಯನ್ನು ಏ.1 ರಿಂದ 25 ರ ವರೆಗೆ ಹಾಗೂ ಅಕ್ಟೋಬರ್ 1 ರಿಂದ 25 ರ ವರೆಗೆ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಏ.30 ಹಾಗೂ ಅ. 30 ರ ಒಳಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರ ಕಾರ್ಯಾಲಯ, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.