ಉಡುಪಿ: ರಾಜ್ಯದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಾರ್ಚ್ 26 ಹಾಗೂ 27 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಮಾ.26 ರಂದು ಬೆಳಗ್ಗೆ 7.30 ರಿಂದ 9 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮ. ಮಾ.27 ರಂದು ಬೆ. 7.30 ರಿಂದ 8.30 ರ ವರೆಗೆ ಕೋಟ ಗೃಹ ಕಚೇರಿಯಲ್ಲಿ ಸಾರ್ವಜನಿಕ ಭೇಟಿ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ, ನಂತರ ಹೊನ್ನಾವರಕ್ಕೆ ತೆರಳಲಿರುವರು.