ಬ್ರಹ್ಮಾವರ: ಬ್ರಹ್ಮಾವರ ಗಾಂಧಿನಗರ ಬೈಕಾಡಿ ಮಂದಾರ ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಇವರ ನೂತನ ನಾಟಕ ಪ್ರಸ್ತುತಿ ‘ದೂತ ಘಟೋತ್ಕಚ’ ವು ಮಾ.20 ರಂದು ತೆಕ್ಕಟ್ಟೆಯ ಹಯಗ್ರೀವ ಸಭಾಮಂಟಪದಲ್ಲಿ ಉದ್ಘಾಟನೆಗೊಂಡು ಪ್ರದರ್ಶನಗೊಂಡಿತು.
ಸಮುದಾಯ ಕುಂದಾಪುರದ ಅಧ್ಯಕ್ಷರು ಹಾಗೂ ಶಿಕ್ಷಣ ತಜ್ಞರು ಆಗಿರುವ ಉದಯ ಗಾಂವ್ಕರ್ ಉದ್ಘಾಟಿಸಿ ಮಾತನಾಡಿ ತೆಕ್ಕಟ್ಟೆಯ ಭಾಗ ಕಳೆದ ಹಲವು ವರ್ಷಗಳಿಂದ ಸಾಂಸ್ಕೃತಿಕ ಕ್ಷೇತ್ರವಾಗಿ ಬೆಳವಣಿಗೆ ಹೊಂದುತ್ತಾ ಇದೆ. ನಾಲ್ಕು ಜನ ಕೂಡಿ ನಡೆಸುವ ಯಾವುದೇ ಸಂಘಟನೆಯೂ ಕೂಡ ಸಂತೋಷವನ್ನು ನೀಡುವಂತದ್ದು ಮತ್ತೆ ಹೀಗೆ ಒಡನಾಟದಿಂದ ನಮ್ಮ ಸಂಂಬಂಧಗಳನ್ನು ಶೋಧಿಸಿಕೊಳ್ಳುದಕ್ಕೆ ಸಾಧ್ಯವಾಗಿದೆ.
ನಾಟಕ ನೋಡುವುದರ ಜೊತೆಗೆ ಪ್ರೇಕ್ಷಕನು ತನ್ನೊಳಗೆ ನಾಟಕ ಕಟ್ಟಿಕೊಳ್ಳುವುದು, ಆ ಮೂಲಕ ನಾಟಕವನ್ನು ಹೊಸ ಆಯಾಮದಲ್ಲಿ ಜಗತ್ತನ್ನು ನೋಡುವುದಕ್ಕೆ ಈ ಮಂದಾರ ಸಾಂಸ್ಕೃತಿಕ ಮತ್ತು ಸೇವಾ ಸಂಘಟನೆಯಿಂದ ಸಾಧ್ಯವಾಗಿಸಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ನಾಟಕದ ಸಂಗೀತ ನಿರ್ದೇಶಕ ವಾಸು ಗಂಗೇರ ಕುಂದಾಪುರ, ನಿರ್ದೇಶಕ ರೋಹಿತ್. ಎಸ್. ಬೈಕಾಡಿ, ಹಾಗು ಹಯಾಗ್ರೀವ ಸಭಾ ಮಂಟಪದ ಮುಖ್ಯಸ್ತರಾದ ವೆಂಕಟೇಶ್ ವೈದ್ಯ ಉಪಸ್ಥಿತರಿದ್ದರು. ಸಚಿನ್ ಅಂಕೋಲಾ ಕಾರ್ಯಕ್ರಮ ನಿರ್ವಹಿಸಿದರು.