ನಿರೀಕ್ಷೆಗೂ ಮೀರಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ: ಶ್ರೀವರ್ಮ ಅಜ್ರಿ

ಕಾರ್ಕಳ: ಪ್ರತಿಯೊಂದು ವಿಭಾಗದಲ್ಲೂ ಪ್ರತಿಭಾವಂತರನ್ನು ಗುರುತಿಸುವ ಸತ್ಕಾರ್ಯವು ನಡೆದಿದೆ ಎಂದು ಎಂಪಿಎಂ ಕಾಲೇಜು ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಹೇಳಿದರು. ಅವರು ಕಾರ್ಕಳ ಉತ್ಸವದ ಅಂಗವಾಗಿ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಾಂಸ್ಕೃತಿಕ ಹಾಗೂ ಅಧುನಿಕತೆಯ ಗೂಡುದೀಪ ಸ್ವರ್ಧೆಯಲ್ಲಿ ಪಾಲ್ಗೊಂಡು ಆಯ್ಕೆಗೊಂಡವರಿಗೆ ಬಹುಮಾನ ನೀಡಿ ಮಾತನಾಡಿ ನಿರೀಕ್ಷೆಗೂ ಮೀರಿ ಕಾರ್ಕಳ ಉತ್ಸವ ಯಶಸ್ಸು ಕಂಡಿದೆ. ಬಹುಮಾನವೊಂದೇ ಮಾನದಂಡವಾಗಬಾರದು. ಸೋಲು- ಗೆಲುವು ಇವುಗಳನ್ನು ಸಮಾನವಾಗಿ ಸ್ವೀಕರಿಸಿ, ಸ್ವರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ, ಕಾರ್ಕಳ ಉತ್ಸವದ ಮೂಲಕ ವಿದ್ಯಾರ್ಥಿಗಳಲ್ಲಿ ಇರುವ ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ದೊರೆತಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಾತನಾಡಿ ಕಾರ್ಕಳ ಉತ್ಸವದಿಂದಾಗಿ ಗೂಡುದೀಪ ಸ್ಪರ್ಧೆಯನ್ನು ಆಯೋಜಿಸಿ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಸಚಿವ ಸುನೀಲ್‌ಕುಮಾರ್ ಮುಂದಾಗಿರುವುದು ಶ್ಲಾಘನೀಯ ಎಂದರು.

ಕಾರ್ಕಳ ಉತ್ಸವದ ಅಂಗವಾಗಿ ಪೆರ್ವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ ಸಾಂಸ್ಕೃತಿಕ ಹಾಗೂ ಅಧುನಿಕತೆಯ ಗೂಡುದೀಪ ಸ್ವರ್ಧೆಯಲ್ಲಿ ಪಾಲ್ಗೊಂಡು ಆಯ್ಕೆಗೊಂಡವರಿಗೆ ಬಹುಮಾನ ನೀಡಿ ಮಾತನಾಡಿದರು.

ಕಾಬೆಟ್ಟು ಮಂಜುನಾಥ ಪೈ ಸ್ಮಾರಕ ಪದವಿ ಕಾಲೇಜಿನ ಪ್ರಾಂಶುಪಾಲ ಶ್ರೀವರ್ಮ ಅಜ್ರಿ ಗೌರವ ಸ್ಮರಣಿಕೆಯನ್ನು ವಿಠಲ ಭಟ್, ವಿದ್ಯಾ ಭಟ್ ದಂಪತಿ, ಬಜ್ಪೆ ಸುಂಕದಕಟ್ಟೆ ಜಗದೀಶ್ ಅಮೀನ್, ಕಾವು ಉಮೇಶ್, ಗುಂಡ್ಯಡ್ಕ ಅತ್ತೂರು ಶಿವಕುಮಾರ್ ಇವರಿಗೆ ನೀಡಲಾಯಿತು. ಗೂಡುದೀಪ ಸ್ವರ್ಧೆಯಲ್ಲಿ ಪಾಲ್ಗೊಂಡು ವಿಜೇತಗೊಂಡಿರುವ ಶಿಕ್ಷಣ ಸಂಸ್ಥೆಗಳಿಗೆ ಅತಿಥಿಗಳು ಬಹುಮಾನ ನೀಡಿದರು.

ಶಾಲಾ ಮುಖ್ಯೋಪಾಧ್ಯಾಯಿನಿ ಲಕ್ಷ್ಮಣ ಹೆಗ್ಡೆ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಆರ್.ಬಿ. ಜಗದೀಶ್, ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಕೃಷ್ಣ ನಾಯ್ಕ, ಪತ್ರಕರ್ತರಾದ ಬಾಲಕೃಷ್ಣ ಭೀಮಗುಳಿ, ವಾಸುದೇವ ಭಟ್, ರಾಮ್ ಅಜೆಕಾರು, ಅರುಣ್ ಭಟ್, ವಸಂತಕುಮಾರ್ ಬೆಳ್ತಂಗಡಿ, ರಾಮಚಂದ್ರ ಬರಪ್ಪಾಡಿ, ವೀಣಾ ಉಪಸ್ಥಿತರಿದ್ದರು.

ಶ್ರೀ ಭುವನೇಂದ್ರ ಕಾಲೇಜಿನ ವಿದ್ಯಾರ್ಥಿಗಳಾದ ಅನುಷಾ, ಅಕ್ಷತಾ, ವೈಷ್ಣವಿ ಪ್ರಾರ್ಥಿಸಿದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಸವಿತಾ ಸ್ವಾಗತಿಸಿದರು. ಶ್ರೀಕಾಂತ್ ಪ್ರಭು ಪಳ್ಳಿ ನಿರೂಪಿಸಿದರು. ಪ್ರಮೀಳಾ ಹರೀಶ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಂದೇಶ್ ಶೆಟ್ಟಿ ಧನ್ಯವಾದವಿತ್ತರು.