ಉಡುಪಿ: ನಗರ ಸಭೆ ಉಡುಪಿ ಮತ್ತು ಸಾಹಸ್ ಎನ್. ಜಿ. ಓ ಜಂಟಿಯಾಗಿ ಆರೋಗ್ಯ ಸಮಾಜದ ನಿರ್ಮಾಣಕ್ಕಾಗಿ ಮನೆಯ ಹಸಿ ಕಸವನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಉಚಿತ ಕಾಂಪೋಸ್ಟ್ ಡ್ರಮ್ ಮತ್ತು ಉಚಿತ ತರಕಾರಿ ಬೀಜ ವಿತರಣೆ ಕಾರ್ಯಕ್ರಮ ಶ್ರೀ ದೇವಿ ಜ್ಞಾನೋದಯ ಪಾಂಡುರಂಗ ಭಜನಾ ಮಂದಿರ ಕಾನಂಗಿ ಕೊಡವೂರುಯಲ್ಲಿ ನಡೆಯಿತು.
ನಗರ ಸಭಾ ಅಧ್ಯಕ್ಷರು ಸುಮಿತ್ರಾ ಕೆ, ವಿಜಯ್ ಕೊಡವೂರು ನಗರ ಸಭಾ ಸದಸ್ಯರು, ಸಾಹಸ್ ಸಂಸ್ಥೆಯ ಸೂಪರ್ವೈಸರ್ ವಿಶಾಲ ದೇವಾಡಿಗ, ರಾಜೇಶ್, ಬೇಬಿ, ಚಂದ್ರಾವತಿ ಇನ್ನಿತರರು ಉಪಸ್ಥಿತರಿದ್ದರು.












