ಉಡುಪಿ: 700 ಗ್ರಾಂ. ಅಕ್ರಮ ಗಾಂಜಾ ವಶ

ಉಡುಪಿ: ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತೆ ಶೈಲಜಾ ಕೋಟೆ ಹಾಗೂ ಉಡುಪಿಯ ಅಬಕಾರಿ ಉಪ ಆಯುಕ್ತೆ ರೂಪ ಎಂ ಇವರ ನಿರ್ದೇಶನದ ಮೇರೆಗೆ, ಉಡುಪಿ ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಗುರುಮೂರ್ತಿ ಡಿ ಪಾಲೇಕರ್ ಮಾರ್ಗದರ್ಶನದಂತೆ, ಶುಕ್ರವಾರ ಉಡುಪಿ ತಾಲೂಕು ಮಲ್ಪೆ ಬಂದರ್‌ನ ಮೀನು ಹರಾಜು ನಡೆಯುವ ಸ್ಥಳದ ಎದುರಿನ ಮಂಜುಗಡ್ಡೆ ಖಾಲಿ ಮಾಡುವ ಜಾಗದಲ್ಲಿ ವಾಹನ ಸಂಖ್ಯೆ ಕೆ.ಎ20 ಎಎ-5230 ರಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುವುದನ್ನು ಕಂಡು ದಾಳಿ ನಡೆಸಿ, 700 ಗ್ರಾಂ ಗಾಂಜಾ ತುಂಬಿದ ಪ್ಲಾಸ್ಟಿಕ್ ಚೀಲ ಹಾಗೂ ವಾಹನವನ್ನು ವಶಪಡಿಸಿಕೊಂಡಿದ್ದು, ಇದರ ಮೌಲ್ಯ 6,40,000 ರೂ. ಗಳಾಗಿದ್ದು, ಎನ್.ಡಿ.ಪಿ.ಎಸ್ ಕಾಯ್ದೆಯಡಿ ಉಡುಪಿ ಉಪ ವಿಭಾಗ ಕಚೇರಿಯ ಅಬಕಾರಿ ನಿರೀಕ್ಷಕಿ ಜ್ಯೋತಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ.

ದಾಳಿಯಲ್ಲಿ ಉಡುಪಿ ಉಪ ವಿಭಾಗದ ಅಬಕಾರಿ ಉಪ ನಿರೀಕ್ಷಕ ರುಬಿಯಾ ನದಾಫ್, ಉಡುಪಿ ವಲಯ-2 ರ ಅಬಕಾರಿ ಉಪ ನಿರೀಖ್ಷಕ ದಿವಾಕರ್ ಹಾಗೂ ಅಬಕಾರಿ ಪೇದೆಯವರಾದ ಕೃಷ್ಣ ಆಚಾರಿ ಮತ್ತು ನಂಜುಂಡಸ್ವಾಮಿ ಉಪಸ್ಥಿತರಿದ್ದರು.