ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ ಬ್ಯಾಂಕ್ ಲಿ. ಉಡುಪಿ ಇದರ ಗಾಹಕರ ಸಮಾವೇಶ ಮಾರ್ಚ್ 19 ರಂದು ಮಧ್ಯಾಹ್ನ 3 ಗಂಟೆಗೆ ಉಡುಪಿ ಕಿದಿಯೂರು ಹೋಟೆಲ್ನ ಶೇಷಶಯನ ಸಭಾಂಗಣದಲ್ಲಿ ಆಯೋಜಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಎ ಸುವರ್ಣ ತಿಳಿಸಿದ್ದಾರೆ.
ಗ್ರಾಹಕರ ಸಮಾವೇಶವನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ನಾಡೋಜ ಡಾ| ಜಿ. ಶಂಕರ್ ಉದ್ಘಾಟಿಸಲಿದ್ದು, ಬ್ಯಾಂಕಿನ ಅಧ್ಯಕ್ಷರಾದ ಯಶ್ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ರಿ. ಉಚ್ಚಿಲ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಗೀತಾನಂದ ಫೌಂಡೇಷನ್ ಕೋಟ ಪ್ರವರ್ತಕರಾದ ಶ್ರೀ ಆನಂದ ಸಿ. ಕುಂದರ್, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷರಾದ ಶ್ರೀ ಬಿ. ಜಯಕರ ಶೆಟ್ಟಿ ಇಂದ್ರಾಳಿ ಯವರು ಭಾಗವಹಿಸಲಿದ್ದಾರೆ.
ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಸಹಕಾರಿ ಸಂಘಗಳ ಉಪನಿಬಂಧಕರಾದ ಶ್ರೀ ಬಿ. ಪ್ರವೀಣ್ ನಾಯಕ್, ಕರ್ನಾಟಕ ರಾಜ್ಯ ಬಸ್ ಮಾಲಕರ ಸಂಘಗಳ ಮಹಾಮಂಡಲ ಬೆಂಗಳೂರು ಅಧ್ಯಕ್ಷರಾದ ಶ್ರೀ ಸುರೇಶ್ ನಾಯಕ್ ಕುಯಿಲಾಡಿ, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಕೆ. ಸುವರ್ಣ, ಮಾಂಡವಿ ರಿಯಲ್ ಎಸ್ಟೇಟ್ ಡೆವಲರ್ಸ್ ಆಡಳಿತ ನಿರ್ದೇಶಕರಾದ ಶ್ರೀ ಜರ್ರಿ ವಿನ್ಸೆಂಟ್ ಡಯಾಸ್, ಉಜ್ವಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀ ಪುರುಷೋತ್ತಮ ಶೆಟ್ಟಿ, ಕಿದಿಯೂರು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀ ಭುವನೇಂದ್ರ ಕಿದಿಯೂರು, ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಪ್ರವರ್ತಕರಾದ ಶ್ರೀ ಗೋವಿಂದ ಬಾಬು ಪೂಜಾರಿ, ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀ ಮನೋಹರ್ ಎಸ್. ಶೆಟ್ಟಿ, ಕಾಂಚನ್ ಹ್ಯುಂಡೈ ಆಡಳಿತ ನಿರ್ದೇಶಕರಾದ ಶ್ರೀ ಪ್ರಸಾದ್ರಾಜ್ ಕಾಂಚನ್, ಶ್ರೀ ಲಕ್ಷ್ಮೀ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀ ಬಿ. ಎನ್. ಶಂಕರ ಪೂಜಾರಿ, ಯಶಸ್ವಿ ಫಿಶ್ ಮೀಲ್ & ಆಯಿಲ್ ಕಂ. ಆಡಳಿತ ನಿರ್ದೇಶಕರಾದ ಶ್ರೀ ಸಾಧು ಸಾಲ್ಯಾನ್, ಮತ್ಸೊಂದ್ಯಮಿ ಶ್ರೀ ಆನಂದ ಪಿ. ಸುವರ್ಣ, ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಶ್ರೀ ಹರಿಯಪ್ಪ ಕೋಟ್ಯಾನ್, ಕಾಂಚನ್ & ಕಂ. ಲೆಕ್ಕಪರಿಶೋಧಕರಾದ ಶ್ರೀ ಗಣೇಶ್ ಬಿ. ಕಾಂಚನ್ ರವರು ಉಪಸ್ಥಿತರಿರಲಿದ್ದಾರೆ.
ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟಿದ್ದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ಪ್ರಸ್ತುತ್ಲ 347 ಕೋಟಿ ಠೇವಣಿÀ ಹಾಗೂ 265 ಕೋಟಿ ಸಾಲ ಮತ್ತು ಮುಂಗಡದೊಂದಿಗೆ 605 ಕೋಟಿ ವ್ಯವಹಾರ ನಡೆಸಿದ್ದು, ಕಳೆದ 13 ವರ್ಷಗಳಿಂದ ಸದಸ್ಯರಿಗೆ ಶೇ.18 ಡಿವಿಡೆಂಡ್ ನೀಡುತ್ತಿರುವ ಮೂಲಕ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ಯಾಂಕಿಂಗ್ ಕ್ಷೇತ್ರದ ಆಧುನಿಕ ಸೌಲಭ್ಯಗಳೊಂದಿಗೆ ಗ್ರಾಹಕರಿಗೆ ಉತ್ತಮ ಸೇವೆ ನೀಡುತ್ತಿರುವ ಬ್ಯಾಂಕ್, ವಿದ್ಯಾರ್ಥಿಗಳಿಗೆ ಮಹಾಲಕ್ಷ್ಮೀ ವಿದ್ಯಾಸಿರಿ ಝೀರೋ ಬ್ಯಾಲೆನ್ಸ್ ಉಳಿತಾಯ ಖಾತೆ ಯೋಜನೆ ಆರಂಭಿಸಿದ್ದು, ಗ್ರಾಹಕರ ಸಮಾವೇಶದ ಪ್ರಯುಕ್ತ ಠೇವಣಿಗಳಿಗೆ ಶೇ. 0.40% ಅಧಿಕ ಬಡ್ಡಿ, ಸಂಘ ಸಂಸ್ಥೆಗಳ ರೂ. 25 ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ (ಒಂದು ವರ್ಷ ಮೇಲ್ಪಟ್ಟ ಅವಧಿ) ಶೇ. 8.5% ಬಡ್ಡಿ ನೀಡಲಾಗುತ್ತಿದ್ದು, ಆಜಾದಿ ಕಾ ಅಮೃತ್ ಮಹೋತ್ಸವದ ವರ್ಷಾಚರಣೆಯ ಅಂಗವಾಗಿ ವೈಯಕ್ತಿಕ ಉಳಿತಾಯ ಖಾತೆಯಲ್ಲಿ ರೂ. 2 ಲಕ್ಷ ಮೇಲ್ಪಟ್ಟ ಠೇವಣಿಗಳಿಗೆ ಹೆಚ್ಚುವರಿ ಶೇ. 0.50 ಬಡ್ಡಿ ಹಾಗೂ ಸಹಕಾರಿ ಸಂಘ ಮತ್ತು ಸಂಘ ಸಂಸ್ಥೆಗಳ ಉಳಿತಾಯ ಖಾತೆಯಲ್ಲಿ ರೂ. 5 ಲಕ್ಷ ಮೇಲ್ಪಟ್ಟ ಠೇವಣಿಗೆ ಶೇ. 1.0 ಬಡ್ಡಿ ನೀಡಲಾಗುತ್ತಿದ್ದು ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.