ಪಿತ್ರೋಡಿ: ‘ಶ್ರೀ ರಾಮ್ ಟ್ರೋಫಿ- 2022’ ಗೆದ್ದ ಪಳ್ಳಿ ಫ್ರೆಂಡ್ಸ್

ಪಿತ್ರೋಡಿ: ಯಂಗ್ ಸ್ಟಾರ್ ಸ್ಪೋರ್ಟ್ಸ್ & ಕಲ್ಚರಲ್ (ರಿ) ಪಿತ್ರೋಡಿ ಇದರ ಆಶ್ರಯದಲ್ಲಿ ದ್ವಿತೀಯ ಬಾರಿಗೆ ನಡೆದ ಆಹ್ವಾನಿತ ಗ್ರಾಮೀಣ ಮತ್ತು ಪಿನ್ ಕೋಡ್ ಮಾದರಿಯ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ಶ್ರೀ ರಾಮ್ ಟ್ರೋಫಿ 2022 ಸಮಾಪನಗೊಂಡಿದೆ.

ಪಂದ್ಯಾಟದಲ್ಲಿ ಪಿನ್ ಕೋಡ್ ವಿಭಾಗದಲ್ಲಿ ಪಳ್ಳಿ ಫ್ರೆಂಡ್ಸ್ ಪಳ್ಳಿ ಮೊದಲನೆ ಪ್ರಶಸ್ತಿ ಪಡೆದುಕೊಂಡರೆ, ದ್ವಿತೀಯ ಸ್ಥಾನವಾಗಿ ಸಂಡೆ ಫ್ರೆಂಡ್ಸ್ , ಹಾವಂಜೆ ಫ್ರೆಂಡ್ಸ್ ತೃತೀಯ ಸ್ಥಾನ ಪಡೆದುಕೊಂಡಿತು.

ಗ್ರಾಮೀಣ ಮಟ್ಟದ ಪಂದ್ಯಾಟದಲ್ಲಿ ಯಂಗ್ ಸ್ಟಾರ್ ಪ್ರಥಮ ಸ್ಥಾನ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಎಸ್.ಎಲ್. ಎನ್ ಗುಜ್ಜರಬೆಟ್ಟು ಪಡೆದುಕೊಂಡಿತ್ತು.ಇದೇ ಸಂಧರ್ಭದಲ್ಲಿ ಸಾಧನೆಗೈದ ಗಂಗಾಧರ್ ಜಿ ಪಡುಕರೆ ಮತ್ತು ಈಶ್ವರ್ ಮಲ್ಪೆ ಇವರನ್ನು ಸನ್ಮಾನಿಸಲಾಯಿತು.

ಪಂದ್ಯಾಟದಲ್ಲಿ ಬಿ.ಜೆ.ಪಿ ರಾಷ್ಟ್ರೀಯ ಹಿಂದೂಳಿದ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯ ಜಿತೇಂದ್ರ ಶೆಟ್ಟಿ, ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ, ಪ್ರಜ್ವಲ್ ಕಾಂಚನ್, ಶೈಲೇಶ್ ಪಿತ್ರೋಡಿ, ಶಿವಪ್ರಸಾದ್ ಪಟ್ನ, ರಾಹುಲ್ ಶೆಟ್ಟಿ, ಭರತ್ ಪಿತ್ರೋಡಿ,ತೇಜ ಕೋಟ್ಯಾನ್, ಮಹೇಶ್ ಯು, ಯಂಗ್ ಸ್ಟಾರ್ ಅಧ್ಯಕ್ಷ ರಕ್ಷಿತ್, ಪ್ರಧಾನ ಕಾರ್ಯದರ್ಶಿ ಮದನ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಜ್ವಲ್.ಜಿ. ಅಮಿನ್ ನಿರೂಪಿಸಿದರು.