ಉಡುಪಿ: ಮೂಡುಗುಡ್ಡೆ ಕುಡುಬಿ ಸಮುದಾಯದಿಂದ ನಗರದಲ್ಲಿ ಇಂದು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಂಜಾನೆಯೇ ಕೂಡುಕಟ್ಟಿನ ಎಲ್ಲಾ ಸದ್ಯಸರು ವೇಷ ಭೂಷಣ, ಗೆಜ್ಜೆ, ಗುಮ್ಮಟೆಯೊಂದಿಗೆ ಸುಮಾರು 75 ಜನ ಗುರಿಕಾರರ ಮನೆಗೆ ಬಂದು ಸೇರಿದ್ದರು. ಗುರಿಕಾರರ ಮನೆಯಲ್ಲಿ ಪ್ರತಿಷ್ಠೆ, ಹಾಡುಗಳನ್ನು ಹಾಡಿ, ಹೋಳಿ ಹಬ್ಬದ ಸಂಪ್ರದಾಯದಂತೆ ಕೋಲಾಟ, ಗುಮ್ಮಾಟೆ ನರ್ತನವನ್ನು ಮಾಡಿ, ಹೊರ ಗ್ರಾಮಕ್ಕೆ ಹೋಗಲು ಚಾಲನೆಯನ್ನು ನೀಡಲಾಯಿತು.
ಅದರಂತೆ 5 ದಿನಗಳ ನಡೆಯುವ ಈ ಹೋಳಿ ಹಬ್ಬ ಆಚರಣೆಯ ಸದ್ಯಸರು ಗ್ರಾಮದಲ್ಲಿ ತಿರುಗಾಟ ಮಾಡಿ ಮಾ.18ರಂದು ಹೋಳಿ ಹುಣ್ಣಿಮೆ ದಿನ ಮತ್ತೆ ಎಲ್ಲಾ ಕೂಡು ಕಟ್ಟಿನ ಸದಸ್ಯರು ಗುರಿಕಾರರ ಮನೆಗೆ ಸೇರಿ ಈ ವರ್ಷದ ಕೊನೆಯ ಹೋಳಿ ಕುಣಿತ, ನರ್ತನಮಾಡಿ, ಗೆಜ್ಜೆ ವೇಷ ಭೂಷಣವನ್ನು ಕಳಚಿ ಎಲ್ಲರೂ ಸಾಮೂಹಿಕ ಸ್ನಾನ ಮಾಡುವುದರೊಂದಿಗೆ ಹೋಳಿ ಆಚರಣೆ ಮುಕ್ತಾಯಗೊಳ್ಳಲಿದೆ ಎಂದು ಮೂಡುಗುಡ್ಡೆ ಮುದ್ದುಮನೆ ಯೋಗೀಶ್ ತಿಳಿಸಿದ್ದಾರೆ.