ಕಾರ್ಕಳ ಉತ್ಸವ: ಗಾಂಧಿ ಮೈದಾನದಲ್ಲಿ ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಟನೆ

ಕಾರ್ಕಳ: ಅಭಿವೃದ್ದಿ ದೃಷ್ಠಿಯಲ್ಲಿ ಅನೇಕ ಕಲ್ಪನೆ ಇರಿಸಿಕೊಂಡಿರುವ ಸಚಿವರು ಕಾರ್ಕಳಕ್ಕೆ ಅನುದಾನ ತರಿಸಿಕೊಂಡು ಅಭಿವೃದ್ಧಿ ಮಾಡುತ್ತಿದ್ದಾರೆ ಇದಕ್ಕೆ ಇಚ್ಚಾಶಕ್ತಿ ಬೇಕು ಹೊರತು ಅಪನಂಬಿಕೆಯಲ್ಲ. ಅಭಿವೃದ್ಧಿ ದೃಷ್ಟಿಯಲ್ಲಿ ರಾಜಕೀಯವಿಲ್ಲ, ಗ್ರಾಮೀಣ ಭಾಗಗಳ ಸಂಸ್ಕೃತಿಯನ್ನು ಚಿಗುರಿಸುವಂತಾಗಬೇಕು ದಾಖಲೀಕರಣವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದರು.

ಕಾರ್ಕಳ ಗಾಂಧಿ ಮೈದಾನದಲ್ಲಿ ನಡೆದ ಕಾರ್ಕಳ ಉತ್ಸವ ನಗಾರಿ ಬಾರಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಸಂಸ್ಕೃತಿ ಖಾತೆ ಸಚಿವ ವಿ. ಸುನೀಲ್ ಕುಮಾರ್ ಮಾತನಾಡಿ ಸಾಧನೆಗಳು ನಿಂತ ನೀರಾಗಬಾರದು ಅದನ್ನು ಮೀಳಿಗೆಯಿಂದ ಪೀಳಿಗೆಗೆ ಹಂಚಿ ಹೋಗುತ್ತಿರಬೇಕು.

ಸ್ವರ್ಣ ಕಾರ್ಕಳ ಕಲ್ಪನೆಗೆ ಸಲಹೆ ಇರಲಿ ಟೀಕೆಗಳು ಬೇಡವೆಂದರು ಮಂಗಳೂರು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪ್ರಸ್ತಾವಿಕ ಮಾತನಾಡಿದರು.

ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ. ಮಣಿರಾಜ್ ಶೆಟ್ಟಿ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎನ್. ವಿಷ್ಣುವರ್ಧನ್, ಸಹಾಯಕ ಅಯುಕ್ತ ರಾಜು, ಪುರಸಭೆ ಅಧ್ಯಕ್ಷೆ ಸುಮಾಕೇಶವ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕ್ಯಾಪ್ಟನ್ ಗಣೇಶ್ ಕಾರ್ನಿಕ್, ಕನ್ನಡ ಸಂಸ್ಕೃತಿ ಇಲಾಖೆ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ. ಎನ್ ಮಲ್ಲಿಕಾರ್ಜುನ ಸ್ವಾಮಿ ಉಪಸ್ಥಿತರಿದ್ದರು.

ಈಜು ಸ್ಪರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದ ವಿದ್ಯಾ ಪೈ ಅಜೆಕಾರು ಹಾಗೂ ಅಂತರರಾಷ್ಟ್ರೀಯ ಕ್ರೀಡಾ ಪಟು ರೋಹಿತ್ ಕುಮಾರ್ ಕಟೀಲು ಅವರನ್ನು ಸನ್ಮಾನಿಸಲಾಯಿತು.

ಸಾಣೂರು ನರಸಿಂಹ ಕಾಮತ್ ಸ್ವಾಗತಿಸಿದರು. ಪ್ರಭಾಕರ ಕೊಂಡಳ್ಳಿ ಹಾಗು ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.