ಆರ್ ಸಿಬಿ ತಂಡದ ನೂತನ ನಾಯಕನಾಗಿ “ಫಾಪ್ ಡುಫ್ಲೆಸಿಸ್” ನೇಮಕ

ಬೆಂಗಳೂರು: ಆರ್ ಸಿ ಬಿ ತಂಡದ ನೂತನ ನಾಯಕನಾಗಿ ಆಗಿ ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾಪ್ ಡು ಫ್ಲೆಸಿಸ್ ಅವರನ್ನು ಆಯ್ಕೆ ಮಾಡಿದೆ.

ಐಪಿಎಲ್ ಕಳೆದ ಆವೃತ್ತಿಯ ಮುಕ್ತಾಯದ ವೇಳೆಗೆ ನಾಯಕರಾಗಿದ್ದ ವಿರಾಟ್ ಕೊಹ್ಲಿ ತನ್ನ ನಾಯಕತ್ವಕ್ಕೆ ರಾಜಿನಾಮೆ ನೀಡಿದ್ದರು.

ಆ ಬಳಿಕ ನಾಯಕತ್ವಕ್ಕೆ ಮ್ಯಾಕ್ಸ್‌ವೆಲ್ ಸೇರಿದಂತೆ ಹಲವು ಆಟಗಾರರ ಹೆಸರು ಕೇಳಿ ಬಂದಿತ್ತು. ಇದೀಗ ಐಪಿಎಲ್ ಪ್ರಾರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ತಂಡ ನೂತನ ನಾಯಕನನ್ನು ನೇಮಕ ಮಾಡಿದೆ.