ಉಡುಪಿ: ಪವರ್ ಫ್ಲಾಟ್ ಫಾರಂ ಆಫ್ ವುಮೆನ್ ಎಂಟರ್‌ಫ್ರಿನಿಯರ್ಸ್(ರಿ) ಆಶ್ರಯದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಚಾರ್ಟರ್ ಡೇ ಯು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಬಹು ಭಾಷಾ ನಟಿ ವಿನಯ ಪ್ರಸಾದ್ ಅವರು ನೆರವೇರಿಸಿದರು.
ಪವರ್ ಸಂಸ್ಥೆಯ 2022-23ನೇ ಸಾಲಿನ ಅಧ್ಯಕ್ಷರಾಗಿ ಪೂನಂ ಶೆಟ್ಟಿ, ಕಾರ್ಯದರ್ಶಿಯಾಗಿ ಅರ್ಚನಾ ರಾವ್, ಕೋಶಾಧಿಕಾರಿಯಾಗಿ ಪ್ರತಿಭಾ ಆರ್.ವಿ., ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ನಾಯಕ್, ಉಪಾಧ್ಯಕ್ಷರಾಗಿ ಸುವರ್ಶಾ ಮಿನ್ಜ್ ಹಾಗೂ ಶಾಲಿನಿ ಬಂಗೇರ ಪದಗ್ರಹಣ ಸ್ವೀಕರಿಸಿದರು.
ಈ ಸಂದರ್ಭ ಸಮಾಜ ಕಾರ್ಯಕರ್ತೆ ರಾಧಾ ದಾಸ್ ಹಾಗೂ ನಟಿ ವಿನಯ ಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪವರ್ ಸಂಸ್ಥೆಯ ಮಾಜಿ ಅಧ್ಯಕ್ಷೆ ತಾರಾ ತಿಮ್ಮಯ್ಯ, ಸುಗುಣಾ ಶಂಕರ್, ಪ್ರಿಯಾ ಕಾಮತ್ ಮತ್ತಿತರು ಉಪಸ್ಥಿತರಿದ್ದರು.
ಪವರ್ ಸಂಸ್ಥೆಯ ಮಾಜಿ ಅಧ್ಯಕ್ಷೆ ತಾರಾ ತಿಮ್ಮಯ್ಯ ಸ್ವಾಗತಿಸಿ, ಉಪಾಧ್ಯಕ್ಷೆ ಸುವರ್ಶ ಮಿನ್ಜ್ ವಂದಿಸಿದರು.












