ಉಡುಪಿ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜ್ ಸಂಘ ಉಡುಪಿ ವಲಯ ಮತ್ತು ಉಡುಪಿ ಜಿಲ್ಲಾ ಕಾರ್ಮಿಕ ಇಲಾಖೆಯ ಸಹಭಾಗಿತ್ವದಲ್ಲಿ ಪಿಂಚಣಿ ಸಪ್ತಾಹ ಆಚರಣೆ ಮತ್ತು ಪ್ರಧಾನ ಮಂತ್ರಿ ಪಿಂಚಣಿ ನೋಂದಣಿ ಶಿಬಿರ ಬುಧವಾರ ಉದ್ಯಾವರದ ಸಂಘದ ಕಚೇರಿಯಲ್ಲಿ ಆಯೋಜಿಸಲಾಯಿತು.
ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಬಿ.ಆರ್. ಕಾರ್ಯಕ್ರಮ ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ರೋಷನ್ ಕರ್ಕಡ ಅಧ್ಯಕ್ಷತೆ ವಹಿಸಿದ್ದರು.
ಸ್ಥಾಪಕ ಅಧ್ಯಕ್ಷ ಪ್ರಭಾಕರ್ ಕೆ, ಗೌರವ ಸಲಹೆಗಾರ ಯಾದವ್ ಶೆಟ್ಟಿಗಾರ್, ವಿಲ್ಸನ್ ಅಂಚನ್, ಉಪಾಧ್ಯಕ್ಷ ರಾಜೇಶ್ ಜತ್ತನ್, ಕೋಶಾಧಿಕಾರಿ ಸಂತೋಷ್ ಕುಮಾರ್, ಜೊತೆ ಕಾರ್ಯದರ್ಶಿಗಳಾದ ರವೀಂದ್ರ ಶೇಟ್ ತೆಂಕಪೇಟೆ, ಮಧುಸೂದನ್ ಕನ್ನರ್ಪಾಡಿ, ಕಾರ್ಮಿಕ ಸಿಬ್ಬಂದಿ ಸಂಗಯ್ಯ ಹಿರೇಮಠ್, ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರಗಳ ವ್ಯವಸ್ಥಾಪಕ ನಿತೇಶ್ ಶೆಟ್ಟಿಗಾರ್, ವಕ್ತಾರ ನಾಗರಾಜ್ ಶೇಟ್ ಉಪಸ್ಥಿತರಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಮಣಿಪಾಲ ಶಿಬಿರವನ್ನು ಸಂಯೋಜಿಸಿ,. ನಿರೂಪಿಸಿದರು.