ಉಡುಪಿ: ಪವರ್ ಸಂಸ್ಥೆಯ ಆಶ್ರಯದಲ್ಲಿ ಚಾರ್ಟರ್ ಡೇ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಣಿಪಾಲದ ಕಂಟ್ರಿ ಇನ್ ಸಭಾಂಗಣದಲ್ಲಿ ಇದೇ ಮಾ.9 ರಂದು ಸಂಜೆ 5.30 ಕ್ಕೆ ನಡೆಯಲಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ತಾರಾ ತಿಮ್ಮಯ್ಯ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಪವರ್ ಸಂಸ್ಥೆಯ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜರುಗಲಿದೆ. ಮಹಿಳಾ ಸಾಧಕಿ ಕುಂಭಾಶಿಯ ರಾಧಾ ದಾಸ್ ಅವರನ್ನು ಸನ್ಮಾನಿಸಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಚಿತ್ರನಟಿ ವಿನಯಾ ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದರು.
ಸಂಸ್ಥೆಯ ನೂತನ ಅಧ್ಯಕ್ಷರಾಗಿ ಪೂನಂ ಶೆಟ್ಟಿ, ಉಪಾಧ್ಯಕ್ಷರಾಗಿ ಸುವರ್ಷ ಮಿನ್ಜ್, ಕಾರ್ಯದರ್ಶಿಯಾಗಿ ಅರ್ಚನಾ ರಾವ್, ಕೋಶಾಧಿಕಾರಿಯಾಗಿ ಪ್ರತಿಭಾ ಆರ್.ವಿ. ಹಾಗೂ ಜೊತೆ ಕಾರ್ಯದರ್ಶಿಯಾಗಿ ತೃಪ್ತಿ ನಾಯಕ್ ಪದಗ್ರಹಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಪ್ರಿಯಾ ಕಾಮತ್, ಕೋಶಾಧಿಕಾರಿ ಶಾಲಿನಿ ಬಂಗೇರ, ನೂತನ ಅಧ್ಯಕ್ಷೆ ಪೂನಂ ಶೆಟ್ಟಿ, ಕಾರ್ಯದರ್ಶಿ ಅರ್ಚನಾ ರಾವ್, ಕೋಶಾಧಿಕಾರಿ ಪ್ರತಿಭಾ ಆರ್.ವಿ., ಸಂಸ್ಥಾಪಕ ಅಧ್ಯಕ್ಷೆ ರೇಣು ಜಯರಾಮ್ ಇದ್ದರು.












