ಭೂಮಿ ಯೋಜನೆ: ರಾಜ್ಯದಲ್ಲಿಯೇ ಉಡುಪಿ ಜಿಲ್ಲೆ ಪ್ರಥಮ

ಉಡುಪಿ: ಸರ್ಕಾರದ ಭೂಮಿ ಯೋಜನೆಯಡಿ ಫೆಬ್ರವರಿ- 2022 ರ ಮಾಹೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಭೂಮಿ ಸಂಬಂಧಿತ ಅರ್ಜಿಗಳ ಪಹಣಿ ಕಾಲಂ 3 & 9, ವಿವಾದಾಸ್ಪದ/ ವಿವಾದಾಸ್ಪದವಲ್ಲದ ಮ್ಯುಟೇಷನ್ ಪ್ರಕ್ರಿಯೆಗಳ ವಿಲೇವಾರಿ, ಪೈಕಿ ಪಹಣಿ ತಿದ್ದುಪಡಿ, ಭೂಪರಿವರ್ತನೆ, ಕಂದಾಯ ನ್ಯಾಯಾಲಯದ ಕೋರ್ಟ್ ಪ್ರಕರಣ ಇತ್ಯಾದಿಗಳನ್ನು ನಿಗಧಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿ 2.19 ವಿಲೇವಾರಿ ಸೂಚ್ಯಂಕವನ್ನು ಸಾಧಿಸಿ ಸತತವಾಗಿ ಏಪ್ರಿಲ್- 2020 ರಿಂದ ಫೆಬ್ರವರಿ- 2022 ಮಾಹೆಯವರೆಗೆ ಉಡುಪಿ ಜಿಲ್ಲೆಯು ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತದೆ.

ಜಿಲ್ಲೆಯ ಎಲ್ಲಾ ತಾಲೂಕುಗಳು ಉತ್ತಮ ಸಾಧನೆ ಮಾಡಿರುವುದನ್ನು ಪರಿಗಣಿಸಿ ಬೆಂಗಳೂರು ಭೂಮಾಪನಾ ಇಲಾಖೆ ಆಯುಕ್ತರು ಹಾಗೂ ಭೂಮಿ ಮತ್ತು ಯುಪಿಓಆರ್ ನಿರ್ದೇಶಕರು ಅಭಿನಂದನಾ ಪತ್ರವನ್ನು ನೀಡಿ ಜಿಲ್ಲೆಯ ಸಾಧನೆಯ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿರುತ್ತಾರೆ ಎಂದು ಅಪರ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.