ಉಡುಪಿ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ ಉಡುಪಿ ಬ್ಲಾಕ್ ಕಾಂಗ್ರೆಸ್ ವ್ಯಾಪ್ತಿಯ ಕಾರ್ಯಕರ್ತರ ಸಮಾಲೋಚನ ಸಭೆಗೆ ಆಗಮಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಗೆ ನೂತನವಾಗಿ ಆಯ್ಕೆಗೊಂಡ ರಮೇಶ್ ಕಾಂಚನ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ ಶುಭಾಶಯ ಸಲ್ಲಿಸಿದರು.
ಬೂತ್ ಮಟ್ಟದಿಂದ ಪಕ್ಷ ಸಂಘಟನೆಯನ್ನು ಮಾಡುವ ನಿಟ್ಟಿನಲ್ಲಿ ಬ್ಲಾಕ್ ಕಾಂಗ್ರೆಸ್ನ ಅಡಿಯಲ್ಲಿ ಎಲ್ಲಾ ಕಾರ್ಯಕರ್ತರನ್ನು ಒಗ್ಗುಡಿಸಿ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡುವಂತೆ ಅಧ್ಯಕ್ಷರಿಗೆ ಸಲಹೆ ಸೂಚನೆಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಲಕ್ಷ್ಮಣ್ ಪೂಜಾರಿ, ಗಣೇಶ್ ನೆರ್ಗಿ, ನಾರಾಯಣ್ ಕುಂದರ್, ಸತೀಶ್ ಕುಮಾರ್ ಮಂಚಿ, ಡಿಯೋನ್ ಡಿ’ಸೋಜಾ, ಪ್ರಶಾಂತ್ ಪೂಜಾರಿ, ಸುಕೇಶ್ ಕುಂದರ್, ಗಣೇಶ್ ದೇವಾಡಿಗ, ರಮೇಶ್ ಮಲ್ಪೆ, ಹಮ್ಮಾದ್, ಸತೀಶ್ ಪುತ್ರನ್, ಸಾಯಿರಾಜ್ ಕಿದಿಯೂರು, ಹಸನ್ ಸಾಹೇಬ್, ಲಕ್ಷ್ಮೀಶ್ ಶೆಟ್ಟಿ, ಕಮಲ್ ಕೊಡವೂರು, ಸುಲೋಚನಾ ದಾಮೋದರ್, ಮೋನಪ್ಪ ಕೋಟ್ಯಾನ್, ಸತೀಶ್ ಶೆಟ್ಟಿ, ಕರುಣಾಕರ್ ಪೂಜಾರಿ, ಪ್ರೀತಿ ಸಾಲಿನ್ಸ್, ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.