ದೆಹಲಿ: ಭಾರತ ಮತ್ತು ಚೀನಾ ಮಧ್ಯೆ ಗಡಿ ತಕರಾರು ಉಲ್ಭಣಗೊಂಡ ನಂತರ ಎರಡು ದೇಶಗಳ ನಡುವಿನ ಸಂಬಂಧ ಹದಗೆಟ್ಟಿದ್ದು, ಚೀನಾ ವಸ್ತುಗಳ ಮತ್ತು ಚೀನೀ ಅಪ್ಲಿಕೇಷನ್ ಗಳ ಮೇಲೆ ನಿರ್ಬಂಧ ಹೇರಲಾಗಿದೆ. ಭಾರತವು ಬ್ಯಾನ್ ಮಾಡಿರುವ ಚೀನೀ ಅಪ್ಲಿಕೇಷನ್ ಗಳಲ್ಲಿ ಟಿಕ್ ಟಾಕ್ ಕೂಡಾ ಒಂದಾಗಿದೆ. ಟಿಕ್ ಟಾಕ್ ನಂತಹ ಅಪ್ಲಿಕೇಷನ್ ಗಳಿಂದ ದೇಶದ ಆಂತರಿಕ ಭದ್ರತೆಗೆ ಅಪಾಯವಾಗುವ ಸಾಧ್ಯತೆಗಳು ಹೆಚ್ಚಿದ್ದು, ಇಂತಹ ಅಪ್ಲಿಕೇಷನ್ ಗಳನ್ನು ಭಾರತವು ಬ್ಯಾನ್ ಮಾಡಿದೆ. ಚೀನೀ ಅಪ್ಲಿಕೇಷನ್ ಗಳ ಮೇಲೆ ಗ್ರಾಹಕರ ಡೇಟಾ ಕಳ್ಳತನ ಮಾಡುವ ಆರೋಪಗಳೂ ಇವೆ. ಇಂತಹ ಅಪ್ಲಿಕೇಷನ್ ಗಳನ್ನು ಸ್ಮಾರ್ಟ್ ಫೋನ್ ಗಳಲ್ಲಿ ಇರಿಸಿಕೊಳ್ಳುವುದು ಅತ್ಯಂತ ಅಪಾಯಕಾರಿ ಎಂದು ಮನಗಂಡು ಭಾರತ ಇವುಗಳನ್ನು ಬ್ಯಾನ್ ಮಾಡಿದೆ.
ಆದರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮತ್ತು ಅಲ್ಲಿನ ಆಟಗಾರರು ಟಿಕ್ ಟಾಕ್ ಫ್ಯಾನ್ ಆಗಿ ಮಾರ್ಪಟ್ಟಿದ್ದಾರೆ. ರಾವಲ್ಪಿಂಡಿ (ಮಾರ್ಚ್ 4-8), ಕರಾಚಿ (ಮಾರ್ಚ್ 12-16) ಮತ್ತು ಲಾಹೋರ್ (ಮಾರ್ಚ್ 21-25) ನಲ್ಲಿ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಪ್ರಾಯೋಜಕತ್ವವನ್ನು ಟಿಕ್ ಟಾಕ್ ವಹಿಸಿದೆ. ಈ ಪಾಲುದಾರಿಕೆಯ ಜೊತೆಗೆ, ಪಾಕಿಸ್ತಾನದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳಿಗೆ ತೆರೆಮರೆಯ ವಿಷಯ ಮತ್ತು ಪ್ರಸ್ತುತ ಮತ್ತು ಆರ್ಕೈವಲ್ ತುಣುಕನ್ನು ಪ್ರೇರೇಪಿಸುವ ಮತ್ತು ಮನರಂಜನೆ ನೀಡುವ ಉದ್ದೇಶದಿಂದ ಪಿಸಿಬಿಯು ಸರಣಿಯ ಮೊದಲು ಅಧಿಕೃತ ಟಿಕ್ಟಾಕ್ ಖಾತೆಯನ್ನು ಪ್ರಾರಂಭಿಸಲಿದೆ ಎನ್ನಲಾಗಿದೆ.
ಹೆಚ್ ಬಿ ಎಲ್ ಪಾಕಿಸ್ತಾನ್ ಸೂಪರ್ ಲೀಗ್ ಪ್ರಾರಂಭವಾದಾಗಿನಿಂದ ಟಿಕ್ಟಾಕ್ನೊಂದಿಗೆ ನಾವು ಅತ್ಯುತ್ತಮ ಸಂಬಂಧವನ್ನು ಸ್ಥಾಪಿಸಿದ್ದೇವೆ. ಈ ಸಂಬಂಧವನ್ನು ಗಮನಿಸಿ, ಐತಿಹಾಸಿಕ ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಅದನ್ನು ವಿಸ್ತರಿಸಲು ನಾವು ಸಂತೋಷಪಡುತ್ತೇವೆ. ಟಿಕ್ಟಾಕ್ನೊಂದಿಗಿನ ಈ ಒಪ್ಪಂದವು ಪಾಕಿಸ್ತಾನ ಕ್ರಿಕೆಟ್ನ ಪ್ರಸ್ತುತ ಉತ್ತಮ ಆರೋಗ್ಯದ ಸೂಚನೆಯಾಗಿದೆ ಮತ್ತು ನಮ್ಮ ಬ್ರ್ಯಾಂಡ್ನೊಂದಿಗೆ ತಮ್ಮನ್ನು ಸಂಯೋಜಿಸುವ ಮೂಲಕ ವಾಣಿಜ್ಯ ಪಾಲುದಾರರು ನಮ್ಮನ್ನು ನೋಡುವ ಮೌಲ್ಯ ಮತ್ತು ಲಾಭವನ್ನು ಇದು ಪ್ರತಿಬಿಂಬಿಸುತ್ತದೆ, ”ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ಫೈಸಲ್ ಹಸ್ನೈನ್ ತಿಳಿಸಿದ್ದಾರೆ.
ಭಾರತದಲ್ಲಿ ಬ್ಯಾನ್ ಆಗಿರುವ ಟಿಕ್ ಟಾಕ್, ಪಾಕಿಸ್ತಾನಿ ಕ್ರಿಕೆಟ್ ಬೋರ್ಡ್ ನ ಕಣ್ಮಣಿಯಾಗಿರುವುದು ಪಾಕ್-ಚೀನೀ ಭಾಯಿ ಭಾಯಿ ಸಂಬಂಧದ ಮುಂದುವರಿದ ಹೆಜ್ಜೆಯಾಗಿರಲೂಬಹುದು. ಶತ್ರುವಿನ ಶತ್ರು ಮಿತ್ರ ಎನ್ನುವ ಗಾದೆ ಈ ಎರಡು ದೇಶಗಳ ವಿಷಯದಲ್ಲಿ ಭಾರತದ ಪಾಲಿಗೆ ನಿಜವಾದಂತೆ ತೋರುತ್ತಿದೆ.