ಕಾರ್ಕಳ: ಮಾರ್ಚ್ 10 ರಿಂದ 20 ರವರೆಗೆ ಕಾರ್ಕಳ ದಲ್ಲಿ ನಡೆಯುವ ಕಾರ್ಕಳ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಸೋಮವಾರದಂದು ಕಾರ್ಕಳ ಸ್ವರಾಜ್ಯ ಮೈದಾನದಲ್ಲಿ ನಡೆಯಿತು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿ, ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಇದು ಮನೆ ಮನೆ ಮಾತಾಗಲಿದೆ ಎಂದರು.
ನ್ಯಾಯವಾದಿ ಎಂ.ಕೆ ವಿಜಯ ಕುಮಾರ್, ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಜಯರಾಮ್ ಪ್ರಭು, ಅನಂತ ಪದ್ಮನಾಭ ದೇವಸ್ಥಾನದ ಮೊಕ್ತೇಸರ ಪ್ರಶಾಂತ್ ಭಟ್, ಶ್ರೀ ಕೃಷ್ಣ ದೇವಾಲಯದ ಆಡಳಿತ ಮೊಕ್ತೇಸರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ, ಪುರಸಭೆ ಉಪಾಧ್ಯಕ್ಷೆ ಪೂರ್ಣಿಮಾ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್, ಹೆಬ್ರಿ ತಾ. ಪಂ.ಕಾರ್ಯನಿರ್ವಾಹಣಾಧಿಕಾರಿ ಶಶಿಧರ್, ಕಾಳಿಕಾಂಬಾ ದೇವಸ್ಥಾನದ ರಾಮಚಂದ್ರ ಆಚಾರ್ಯ, ವೀರಭದ್ರ ದೇವಸ್ಥಾನದ ಶಿವರಾಮ್ ಶೆಟ್ಟಿಗಾರ್, ಗೋಪಾಲ್ ಕೃಷ್ಣ ಶೆಟ್ಟಿಗಾರ್, ವಿಘ್ನಶ್ ಪಾಠಕ್, ವೃತ್ತ ನಿರೀಕ್ಷಕ ಸಂಪತ್, ಮುಖ್ಯಧಿಕಾರಿ ರೂಪ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು
ಮುನಿರಾಜ ರೆಂಜಾಳ ಪ್ರಸ್ತಾವನೆಗೈದರು, ಗಣೇಶ್ ಜಾಲಸೂರು ಸ್ವಾಗತಿಸಿದರು, ಹರೀಶ್ ಅಜೆಕಾರ್ ಕಾರ್ಯಕ್ರಮ ನಿರೂಪಿಸಿದರು.