ಕಾರ್ಕಳ: ಫೆ.20, ಭಾನುವಾರದಂದು, ಅತ್ತೂರಿನ ಸಂತ ಲಾರೆನ್ಸ್ ಮೈನರ್ ಬೆಸಿಲಿಕಾದ ವಾರ್ಷಿಕ ಉತ್ಸವದ ಆಚರಣೆಗಳು ಸಂಭ್ರಮದಿಂದ ಆರಂಭವಾಯಿತು. ಜನವರಿ ಕೊನೆಯ ವಾರದಲ್ಲಿ ನಡೆಯಬೇಕಿದ್ದ ವಾರ್ಷಿಕ ಹಬ್ಬವನ್ನು ಕೋವಿಡ್ ಭೀತಿಯಿಂದಾಗಿ ಮುಂದೂಡಲಾಗಿತ್ತು. ಭಾನುವಾರ ಬೆಳಗ್ಗೆ ಧ್ವಜಾರೋಹಣದೊಂದಿಗೆ ವಾರ್ಷಿಕ ಮಹೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಬೆಳಗಿನ ಜಾವ ನಡೆದ ಹಬ್ಬದ ಪವಿತ್ರ ಆಚರಣೆಯ ಅಧ್ಯಕ್ಷತೆಯನ್ನು ಶಿವಮೊಗ್ಗ ಧರ್ಮಪ್ರಾಂತ್ಯದ ಬಿಷಪ್ ಡಾ.ಫ್ರಾನ್ಸಿಸ್ ಸೆರಾವೋ ವಹಿಸಿದ್ದರೆ, ಸಂಜೆ ನಡೆದ ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು.
ಸಾವಿರಾರು ಜನ ಬಲಿಪೂಜೆಗಳಲ್ಲಿ ಭಾಗವಹಿಸಿದರು. ವಾರ್ಷಿಕ ಹಬ್ಬವನ್ನು ಫೆಬ್ರವರಿ 20 ರಿಂದ ಫೆಬ್ರವರಿ 24 ರ ಗುರುವಾರದವರೆಗೆ 5 ದಿನಗಳವರೆಗೆ ಆಚರಿಸಲಾಗುತ್ತದೆ. ಬೆಳಿಗ್ಗೆ 8,10,12 ಮತ್ತು ಮಧ್ಯಾಹ್ನ 2,4 ಹಾಗೂ ಸಂಜೆ 7 ಗಂಟೆಗೆ ಬಲಿ ಪೂಜೆಗಳು ನಡೆಯಲಿವೆ.