ಮಣಿಪಾಲ: ಶ್ರೀ ಶಾರದ ಟೀಚರ್ ಟ್ರೈನಿಂಗ್ ಸಂಸ್ಥೆಯ ಪೂರ್ವ ಪ್ರಾಥಮಿಕ ಪ್ರಶಿಕ್ಷಣಾರ್ಥಿ ಶಿಕ್ಷಕಿಯರಿಂದ ಕೈ ಗೊಂಬೆಗಳ ಪ್ರದರ್ಶನ ನಡೆಯಿತು.
ಮಕ್ಕಳ ಗಮನ ಮತ್ತು ಆಸಕ್ತಿಯನ್ನು ಸೆಳೆಯುವ, ಮಕ್ಕಳ ಗೃಹಿಕೆಯ ಶಕ್ತಿಯನ್ನು ಹೆಚ್ಚಿಸುವ ಹಾಗೂ ಮತ್ತು ಮಕ್ಕಳ ಭಾಷಾ ಕೌಶಲ್ಯವನ್ನು ಅಭಿವೃದ್ಧಿ ಪಡಿಸಲು, ಮಕ್ಕಳಿಗೆ ಪುನಾರವರ್ತಿಸಲು ಮತ್ತು ನೆನಪಿಟ್ಟುಕೊಳ್ಳಲು ಸಹಾಯ ಮಾಡುವಂತಹ ವಿವಿಧ ರೀತಿಯ ಗೊಂಬೆಗಳನ್ನು ಇಲ್ಲಿನ ಪ್ರಶಿಕ್ಷಣಾರ್ಥಿ ಶಿಕ್ಷಕಿಯರು ಪ್ರದರ್ಶಿಸಿದರು.
ರೈಮ್ಸ್, ನಾಟಕ, ಕಥೆಗಳಲ್ಲಿ ಕಾಲ್ಚೀಲದ ಗೊಂಬೆ, ನೆರಳಿನ ಗೊಂಬೆ, ಬೆರಳಿನಿಂದ ಆಡಿಸುವ ಗೊಂಬೆ ಹಾಗೂ ಆಟಿಕೆಯ ಬೊಂಬೆಗಳನ್ನು ಪೂರ್ವ ಪ್ರಾಥಮಿಕ ಪಠ್ಯಕ್ರಮದಲ್ಲಿ ಹೇಗೆ ಅಳವಡಿಸಬಹುದೆಂದು ಪ್ರಹಸನದ ಮೂಲಕ ಮಾಡಿ ತೋರಿಸಿದರು.
ಇಲ್ಲಿ ಕೈಗೊಂಬೆ (Puppet) ತಯಾರಿಸುವ ಹಾಗೂ ಪಠ್ಯಕ್ರಮದಲ್ಲಿ ಅಳವಡಿಸುವ ಬಗ್ಗೆ ತರಬೇತಿ ನೀಡಲಾಗುವುದು. ಆಸಕ್ತರು ಹೆಚ್ಚಿನ ವಿವರಗಳಿಗೆ ಈ ಸಂಸ್ಥೆ (9901722527) ಯನ್ನು ಸಂಪರ್ಕಿಸಬಹುದು.