ಉಡುಪಿ: ನಗರದ ವಿಎಸ್ಟಿ ರಸ್ತೆಯ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಶೋರೂಮ್ನಲ್ಲಿ ನಡೆಯುವ ಡೈಮಂಡ್ ಪ್ರಿವೀವ್ ಉತ್ಸವವನ್ನು ಭಾನುವಾರ ಉದ್ಘಾಟಿಸಲಾಯಿತು.
ಫೆ.18ರವರೆಗೆ ಹಮ್ಮಿಕೊಂಡಿರುವ ಈ ಉತ್ಸವವನ್ನು ಪೆನಿನ್ಸುಲಾ ಗ್ರಾಂಡ್ ಹೊಟೇಲ್ನ ಆಡಳಿತ ನಿರ್ದೇಶಕ ಹಾಗೂ ಚೇರ್ಮನ್ ಕರುಣಾಕರ್ ಆರ್. ಶೆಟ್ಟಿ ಉದ್ಘಾಟಿಸಿದರು.
ಡೈಮಂಡ್ ಆಭರಣಗಳಾದ ತುರ್ಕಿಸ್ ಸಂಗ್ರಹವನ್ನು ವೈದ್ಯ ಡಾ. ಅನಂತ್ ಎಸ್. ಶೆಣೈ, ಮಿಡ್ಲ್ ಈಸ್ಟ್ ಸಂಗ್ರಹವನ್ನು ಉದ್ಯಮಿ ಎ.ಆರ್.ಬ್ಯಾರಿ, ಸೋಲಿಟೈರ್ ಸಂಗ್ರಹವನ್ನು ಸೂರಿ ಸೀಫುಡ್ನ ಅಬ್ದುಲ್ ರಹಿಮಾನ್, ಬೆಲ್ಜಿಯಂ ಸಂಗ್ರಹವನ್ನು ಯಾಸ್ಮೀನ್ ಫೈರೋಝ್ ತೋಟ, ಪ್ರೆಂಚ್ ಸಂಗ್ರಹವನ್ನು ಕತಾರ್ ದೋಹಾ ಗೋಲ್ಡನ್ ಟ್ರೇಡಿಂಗ್ ಆ್ಯಂಡ್ ಡೆಕೋರೇಶನ್ನ ಆಡಳಿತ ನಿರ್ದೇಶಕ ಅಸ್ಮತ್ ಅಲಿ, ಯು.ಎಸ್. ಸಂಗ್ರಹವನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ವೀಣಾ ಎಸ್. ಶೆಟ್ಟಿ ಅನಾವರಣಗೊಳಿಸಿ, ಸುಲ್ತಾನ್ ಗೋಲ್ಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮೆನೇಜರ್ ಮುಹಮ್ಮದ್ ಅಜ್ಮಲ್ ವಂದಿಸಿದರು. ಆಯಿಸ್ಲೆ ಡಿಸೋಜ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಸುಲ್ತಾನ್ ಗ್ರೂಪ್ನ ಉಡುಪಿ ಪ್ಲೋರ್ ಮೆನೇಜರ್ ಸಿದ್ದಿಕ್ ಹಸನ್, ಅಸಿಸ್ಟೆಂಟ್ ಸೇಲ್ ಮ್ಯಾನೇಜರ್ಗಳಾದ ಮುಹಮ್ಮದ್ ಶಾಮೀಲ್ ಅಬ್ದುಲ್ ಖಾದರ್, ನಝೀರ್ ಅದ್ದೂರು ಉಪಸ್ಥಿತರಿದ್ದರು.