ಖ್ಯಾತ ರಂಗನಟ ಕಲಾವಿದ ಉಮೇಶ್ ಹೆಗ್ಡೆ ಕಡ್ತಲ ನಿಧನ

ಕಾರ್ಕಳ: ಖ್ಯಾತ ರಂಗ ನಟ ಕಲಾವಿದ ನಾಟಕಕಾರ ಉಮೇಶ್ ಹೆಗ್ಡೆ (47) ಕಡ್ತಲ ನಿಧನರಾಗಿದ್ದಾರೆ. ಅವರು ಅನಾರೋಗ್ಯದಿಂದ ಬಳಲುತಿದ್ದರು.

ಅವರು ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಕಡ್ತಲ ಗ್ರಾಮದ ಲಿಂಗಯ್ಯ ಹೆಗ್ಡೆ ಮತ್ತು ಲಲಿತಾ ಹೆಗ್ಡೆ ಅವರ ದಂಪತಿಯ ಪುತ್ರರಾಗಿರುವ ಉಮೇಶ್ ಹೆಗ್ಡೆ ಕಡ್ತಲ ಅವರು ಪ್ರಾಥಮಿಕ ಹಾಗೂ ಪದವಿಪೂರ್ವ ಶಿಕ್ಷಣವನ್ನು ಕಾರ್ಕಳದಲ್ಲಿ ಪೂರೈಸಿದರು.

ಸಾಧನೆಗಳು: ಕನ್ನಡ ಸೇವಾ ಸಂಘ ಪೊವಾಯಿ ಇದರ 2016ನೇ ಸಾಲಿನ ಕರ್ನಾಟಕ ಸಂಸ್ಕೃತಿ- ಸಂಭ್ರಮ ಕಾರ್ಯಕ್ರಮದ ವಾರ್ಷಿಕ ವಾರ್ಷಿಕ ಅಭಿನಯಶ್ರೀ ಪ್ರಶಸ್ತಿಗೆ ರಂಗಕಲಾವಿದ ಉಮೇಶ ಹೆಗ್ಡೆ ಕಡಲ ಅವರು ಆಯ್ಕೆಯಾಗಿದ್ದರು.

ಅವರು ವೃತ್ತಿ ಜೀವನದಲ್ಲಿ ಹೊಟೇಲ್ ಉದ್ಯಮವನ್ನು ಅರಸಿಕೊಂಡು ಮುಂಬಯಿಗೆ ಆಗಮಿಸಿದರು ಪ್ರೇರಿತರಾಗಿ, ಗುರುಗಳಾದ ಶಂಕರ್ ಹೆಗ್ಡೆ ಎಣ್ಣೆಹೊಳೆ ಅವರ ನಿರ್ದೇಶನದಲ್ಲಿ ಮೇದಿನಿರ್ಮಾಣ ಎಂಬ ನಾಟಕದಲ್ಲಿ ಮಧುವಿನ ಪಾತ್ರದೊಂದಿಗೆ ರಂಗಪ್ರವೇಶ ಮಾಡಿ ಎಳವೆಯಲ್ಲೇ ಜನಮೆಚ್ಚುಗೆ ಪಡೆದ ಕಲಾವಿದರಾಗಿದ್ದರು.

ರಮೇಶ್ ಶಿವಪುರ ಅವರ ಗರಡಿಯಲ್ಲಿ ಪಳಗಿದ ಅವರು ಪ್ರಸ್ತುತ ಮುಂಬಯಿ ಮಹಾನಗರದಲ್ಲಿ ಕಲಾಜಗತ್ತು ಮುಂಬಯಿ, ಕನ್ನಡ ಸೇವಾ ಸಂಘ ಪೊವಾಯಿ, ರಂಗಮಿಲನ ನೆರೆಕರೆ ಕಲಾವಿದೆರ್, ವೀರಕೇಸರಿ ಕಲಾವೃಂದ, ಆಂಕರ್ ಕಲ್ಟರಲ್ ಗ್ರೂಪ್, ಕೊಡ್ಯಡ್ಡ ಕ್ರಿಯೇಶನ್, ನವೋದಯ ಕಲಾವೃಂದ ಹೆಗ್ಗಡೆ ಸೇವಾ ಸಂಘ ಮುಂಬಯಿ, ರಂಗಭೂಮಿ ಫೈನ್ ಆರ್ಟ್ಸ್ ಈ ತಂಡಗಳ ಮುಖಾಂತರ ಉತ್ತಮ ಪಾತ್ರಗಳನ್ನು ನಿರ್ವಹಿಸಿದ ಹೆಗ್ಗಳಿಕೆಯನ್ನು ಹೊಂದಿದ್ದರು.

ತುಳು ಚಲನ ಚಿತ್ರ ಅಪ್ಪೆ ಟೀಚರ್ ಹಾಗು ತುಳುಚಿತ್ರಗಳಲ್ಲಿ ಅಭಿನಯಿಸಿ ಓರ್ವ ಯಕ್ಷಗಾನ ಕಲಾವಿದನಾಗಿ, ನಾಟಕ, ಕಲಾವಿದನಾಗಿ, ನಿರ್ದೇಶಕನಾಗಿ ತುಳು-ಕನ್ನಡಿಗರಿಗೆ ಚಿರಪರಿಚಿತರಾಗಿದ್ದರು.

ಪತ್ನಿ ಮಮತಾ ಮತ್ತು ಮಕ್ಕಳಾದ ಉನ್ನತಿ, ಸಂಸ್ಕೃತಿ ಅವರನ್ನು ಬಿಟ್ಟು ಅಗಲಿದ್ದಾರೆ .