ಅಜೆಕಾರು: ವಿಪರೀತವಾಗಿ ಮದ್ಯ ಸೇವಿಸಿ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಜೆಕಾರಿನ ಕೆರ್ವಾಶೆ ಪೇಟೆಯಲ್ಲಿ ಫೆ.5 ರಂದು ಬೆಳಿಗ್ಗೆ ನಡೆದಿದೆ.
ಕೆರ್ವಾಶೆ ನಿವಾಸಿ 53 ವರ್ಷದ ಹಮೀದ್ ಮೃತಪಟ್ಟ ವ್ಯಕ್ತಿ. ಇವರು ವಿಪರೀತ ಸಾರಾಯಿ ಕುಡಿಯುವ ಅಭ್ಯಾಸ ಹೊಂದಿದ್ದು, ಸುಮಾರು 1 ವರ್ಷದಿಂದ ತನ್ನ ಹೆಂಡತಿ ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ಕೆರ್ವಾಶೆಯಲ್ಲಿ ಸುತ್ತ-ಮುತ್ತ ತಿರುಗಾಡುತ್ತಿದ್ದರು.
ಆರು ತಿಂಗಳಿನಿಂದ ಮನೆಗೆ ಹೋಗದೆ ಕೆರ್ವಾಶೆ ಪೇಟೆಯಲ್ಲಿಯೇ ಶೇಂದಿ ಅಂಗಡಿಯ ವರಾಂಡದಲ್ಲಿ ಮಲಗುತ್ತಿದ್ದರು. ಎಂದಿನಂತೆ ಫೆ.4 ರಂದು ಸಂಜೆ ವಿಪರೀತ ಸಾರಾಯಿ ಕುಡಿದು ಹಳೆ ಸೇಂದಿ ಅಂಗಡಿಯ ವರಾಂಡದಲ್ಲಿ ಮಲಗಿದ್ದರು. ಇಂದು ಬೆಳಿಗ್ಗೆ ನೋಡುವಾಗ ಹಮೀದ್ ಮೃತಪಟ್ಟಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.