ಬಂದರು, ಮೀನುಗಾರಿಕೆ ಮತ್ತು ಒಳನಾಡು ಸಾರಿಗೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ಅವರು ಗುರುವಾರ ಪೆರಂಪಳ್ಳಿ ಶ್ರೀ ಮಹಾಲಿಂಗೇಶ್ವರ ಹಾಗೂ ಮಹಾಗಣಪತಿ ದೇವಸ್ಥಾನದ ವರ್ಷಾವಧಿ ಉತ್ಸವದ ಪ್ರಯುಕ್ತ ದೇವಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಿ.ಎನ್. ಪ್ರಸನ್ನ ಕುಮಾರ್ ರಾವ್, ವಾಸುದೇವ ಭಟ್ ಪೆರಂಪಳ್ಳಿ ಹಾಗೂ ಸಮಿತಿ ಸದಸ್ಯರು ಸಚಿವರನ್ನು ಬರಮಾಡಿಕೊಂಡರು. ಮಾಜಿ ಜಿಪಂ ಅಧ್ಯಕ್ಷ ದಿನಕರಬಾಬು, ಹೆರ್ಗ ಜಯರಾಮ ತಂತ್ರಿಗಳು, ಅರ್ಚಕ ಪ್ರದ್ಯುಮ್ನ ಭಟ್, ಉಪಸ್ಥಿತರಿದ್ದರು.
ವ್ಯವಸ್ಥಾಪನಾ ಸಮಿತಿ ಸದಸ್ಯರುಗಳಾದ ಪುಷ್ಪಾ ಪ್ರಭಾಕರ ಆಚಾರ್ಯ , ಜಯಕುಮಾರ್ ಸಾಲ್ಯಾನ್, ಗಣಪತಿ ಪೂಜಾರಿ, ಶಂಕರ್ ಕುಲಾಲ್, ಬಾಬು ನಾಯ್ಕ್, ಉಮೇಶ್ ಶೆಟ್ಟಿ ಹಾಗೂ ಪ್ರಶಾಂತ್ ಭಟ್, ನಗರಸಭಾ ಸದಸ್ಯೆ ಅರುಣಾ ಸುಧಾಮ ಮೊದಲಾದವರು ಇದ್ದರು.