ನವದೆಹಲಿ: ಹೋಟೆಲ್, ರೆಸ್ಟೋರೆಂಟ್ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಮಂಗಳವಾರ ₹91.50 ಇಳಿಕೆಯಾಗಿದೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.
ರಾಷ್ಟ್ರೀಯ ತೈಲ ಮಾರಾಟ ಕಂಪನಿಗಳು ಬೆಲೆ ಇಳಿಕೆ ನಿರ್ಧಾರ ಕೈಗೊಂಡಿವೆ ಎನ್ನಲಾಗಿದ್ದು, ಇಂದಿನಿಂದಲೇ ಹೊಸ ದರ (ಫೆಬ್ರುವರಿ 1) ಜಾರಿಗೆ ಬರುವ ಸಾಧ್ಯತೆಗಳಿವೆ.
ಈ ತೀರ್ಮಾನದಿಂದ ದೆಹಲಿಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಬಳಸುವ 19 ಕೆ.ಜಿ ಎಲ್‌ಪಿಜಿ ಸಿಲಿಂಡರ್ ದರ ₹1907 ಆಗಲಿದೆ.