ಮಣಿಪಾಲದ ಈಶ್ವರನಗರ ವಾರ್ಡ್ ನ ತ್ರಿಶಂಕು ನಗರ ಮತ್ತು ನರಸಿಂಗೆ ಮೂಲಕ ಬಡಗುಬೆಟ್ಟು ಗ್ರಾಪಂನ ಅರ್ಬಿ – ದಶರಥನಗರಕ್ಕೆ ಸಂಪರ್ಕಿಸುವ ಸುಮಾರು ಒಂದೂವರೆ ಕಿಮೀ ರಸ್ತೆ ನಿರ್ಮಾಣಕ್ಕಾಗಿ ಭಾನುವಾರ ಸ್ಥಳ ಪರಿಶೀಲನೆ ಮತ್ತು ಸಮೀಕ್ಷೆ ನಡೆಸಲಾಯಿತು.
ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಮತ್ತು ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಅವರ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಸಲಾಯಿತು.
ನರಸಿಂಗೆ ದೇವಸ್ಥಾನದ ಆಡಳಿತ ಮೊಕ್ತೇಸರ ಆನಂದ್ ಸಾಲ್ವಂಕರ್, ಸ್ಥಳೀಯ ಪ್ರಮುಖರಾದ ಪ್ರಕಾಶ್ ನಾಯಕ್, ಗಿರೀಶ್, ಸತೀಶ್ ಸಾಲಿಯಾನ್, ಡಾ. ಬಾಲಕೃಷ್ಣ ಮದ್ದೋಡಿ, ಇಂದಿರಾ ಶಿವರಾವ್, ನಿವೃತ್ತ ಪ್ರಾಂಶುಪಾಲ ಪ್ರಕಾಶ್ ಶೆಣೈ, ಉದ್ಯಮಿ ಪ್ರಸಾದ್ ಹೆಗ್ಡೆ, ರಾಧಾಕೃಷ್ಣ ಮತ್ತು ಸ್ಥಳೀಯ ಭೂ ಮಾಲೀಕರು ಉಪಸ್ಥಿತರಿದ್ದರು.