ಕಾರ್ಕಳ: ಕೋವಿಡ್ ವೀಕೆಂಡ್ ಹಾಗೂ ನೈಟ್ ಕರ್ಫ್ಯೂನಿಂದ ಅರ್ಧಕ್ಕೆ ಮೊಟಕುಗೊಂಡಿದ್ದ ಕಂಬಳ ಕೂಟಗಳು, ಇದೀಗ ಮತ್ತೆ ಶುರುವಾಗಿದೆ.
ವೀಕೆಂಡ್ ಹಾಗೂ ನೈಟ್ ಕರ್ಫ್ಯೂ ರದ್ದಾದ ಬೆನ್ನಲ್ಲೇ ಕಂಬಳ ಜಾತ್ರೆಗೆ ಕರಾವಳಿ ಸಜ್ಜುಗೊಂಡಿದೆ. ಇದೇ ಬರುವ ಫೆಬ್ರವರಿ 5ರಂದು ಕಾಂತಾವರ ಬಾರಾಡಿಬೀಡು ಸೂರ್ಯಚಂದ್ರ ಜೋಡುಕೆರೆ ಕಂಬಳದೊಂದಿಗೆ ಮತ್ತೆ ಕರಾವಳಿಯಾದ್ಯಂತ ಕಂಬಳ ಉತ್ಸವ ಆರಂಭವಾಗಲಿದೆ ಎಂದು ಕಂಬಳ ಸಮಿತಿಯ ಪ್ರಕಟಣೆ ತಿಳಿಸಿದೆ.












