ಆಚಾರ್ಯಾಸ್ ಏಸ್: ದ್ವಿತೀಯ ಪಿಯುಸಿ ಪರೀಕ್ಷಾ ಸ್ನೇಹಿ ಕೃತಿ ಬಿಡುಗಡೆ

ಉಡುಪಿ: 9, 10, ಪಿಯುಸಿ, ಸಿ.ಇ.ಟಿ, ಜೆ.ಇ.ಇ, ನೀಟ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಟ ಫಲಿತಾಂಶ ಗಳಿಸುತ್ತಿರುವ ಉಡುಪಿ ಆಚಾರ್ಯಾಸ್ ಏಸ್ ವತಿಯಿಂದ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಪರೀಕ್ಷಾ ಸ್ನೇಹಿ ಕೃತಿಯನ್ನು ನೀಡಲಾಯಿತು.

ದ್ವಿತೀಯ ಪಿಯುಸಿ ಯ ವಿಜ್ಞಾನ ವಿದ್ಯಾರ್ಥಿಗಳ ಗರಿಷ್ಟ ಫಲಿತಾಂಶಕ್ಕಾಗಿ ಏಸ್ ಸಂಸ್ಥೆಯ ಪ್ರತಿಭಾನ್ವಿತ ಪ್ರಾಧ್ಯಾಪಕ ವೃಂದ ರಚಿಸಿರುವ ಕೃತಿಯನ್ನು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕರಾದ ಶ್ರೀಯುತ ಜೇಸನ್ ಸರ್ ಅವರು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ನೀಡಿ ಶುಭ ಹಾರೈಸಿದರು.

ಸಂಪೂರ್ಣ ಉಚಿತವಾಗಿ ಈ ಕೃತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ.
ಈ ಕೃತಿಯಲ್ಲಿ ಫಿಸಿಕ್ಸ್, ಕೆಮಿಸ್ಟ್ರಿ, ಮ್ಯಾತ್ಸ್, ಬಯಾಲಜಿಯ ಪ್ರತೀ ಅಧ್ಯಾಯಗಳು ಮತ್ತು ಈ ಅಧ್ಯಾಯಗಳಿಂದ ಪರೀಕ್ಷೆಯಲ್ಲಿ ನಿರೀಕ್ಷಿಸಲಾಗುವ ಪ್ರಮುಖ ಪ್ರಶ್ನೆಗಳು, ಸಂಬಂದಿಸಿದ ಉತ್ತರಗಳನ್ನು ಸವಿವರವಾದ ರೀತಿಯೊಂದಿಗೆ ನೀಡಲಾಗಿದೆ.

ಜೊತೆಗೆ ಪ್ರಿಪರೇಟರಿ, ಹಾಗೂ ವಾರ್ಷಿಕ ಪರೀಕ್ಷೆಯ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಉತ್ತರಗಳೊಂದಿಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಪಿ.ಲಾತವ್ಯ ಆಚಾರ್ಯ ಹಾಗೂ ಅಕ್ಶೋಭ್ಯ ಆಚಾರ್ಯ ಉಪಸ್ಥಿತರಿದ್ದರು.

ಮುಂದಿನ ವರ್ಷದ 9ನೇ ಹಾಗೂ10ನೇ ತರಗತಿ ಮತ್ತು ಪಿಯುಸಿ ಯ ವಿಜ್ಞಾನ ಮತ್ತು ಕಾಮರ್ಸ್ ವಿಷಯದ ವಕೇಷನ ತರಬೇತಿಗಳು ಇನ್ನಷ್ಟು ಉಪಯುಕ್ತ ಸೌಲಭ್ಯದೊಂದಿಗೆ ಏಪ್ರಿಲ್ ಮೊದಲ ವಾರದಿಂದ ಆರಂಭವಾಗಲಿದೆ. ಸಿ.ಇ.ಟಿ, ಜೆ, ಇ.ಇ, ಹಾಗೂ ನೀಟ್ ವಿಷಯಗಳಿಗೆ ಕ್ರಾಶ್ ಕೋರ್ಸ್ ಗಳು ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆ ಮುಗಿದ ತಕ್ಷಣ ಆರಂಭವಾಗಲಿದೆ.

ಈ ತರಬೇತಿಗಳಿಗೆ ಈಗಾಗಲೇ ನೋಂದಾವಣಿ ಆರಂಭವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಉಡುಪಿ ತೆಂಕ ಪೇಟೆಯ ವೆಂಕಟ್ರಮಣ ದೇವಾಲಯದ ಮುಂಭಾಗದ ರಾಧೇ ಶ್ಯಾಮ ಕಟ್ಟಡದಲ್ಲಿರುವ ಹಾಗೂ ಬ್ರಹ್ಮಾವರದ ಮಧುವನ ಸಂಕೀರ್ಣದಲ್ಲಿರುವ ಆಚಾರ್ಯಾಸ್ ಏಸ್ ಸಂಸ್ಥೆಯನ್ನು ಸಂಪರ್ಕಿಸಬೇಕೆಂದು ಸಂಸ್ಥೆಯ ನಿರ್ದೇಶಕ ಪಿ.ಅಕ್ಷೋಭ್ಯ ಆಚಾರ್ಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೋನ್: 9901420714, 0820-4299111