ಉಡುಪಿ: ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟರ್ ಅನ್ನು ಕಳವು ಮಾಡಿರುವ ಘಟನೆ ಉಡುಪಿ ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಎಂಬಲ್ಲಿ ಸೋಮವಾರ ನಡೆದಿದೆ.
ಸ್ಕೂಟರ್ ಕಳ್ಳತನ ಮಾಡಿರುವ ವ್ಯಕ್ತಿಯನ್ನು ಸಾಲಿಗ್ರಾಮ ಸಾಸ್ತಾನ ವ್ಯಾಪ್ತಿಯ ಯುವಕ ಎಂದು ಗುರುತಿಸಲಾಗಿದೆ. ಬೈಕ್ ಮಾಲೀಕರು ಬೈಲಕೆರೆಯ ಸಾಯಿರಾಧ ಗೋಕುಲ್ ಧಾಮ್ ಬಳಿ ಹೋಂಡಾ ಡಿಯೋ ಸ್ಕೂಟರ್ ಅನ್ನು ನಿಲ್ಲಿಸಿ ಕರ್ಮಷಿಯಲ್ ಪಾರ್ಸೆಲ್ ಕೊಡಲು ಹೋಗಿದ್ದರು. ಈ ವೇಳೆ ಅದೇ ದಾರಿಯಲ್ಲಿ ಬಂದ ಕಳ್ಳನೋರ್ವ ಪಾರ್ಸೆಲ್ ವಸ್ತುವಿನೊಂದಿಗೆ ಸ್ಕೂಟರ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ. ಆತ ಸ್ಕೂಟರ್ ಅನ್ನು ಕಳವು ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳವಾದ ಸ್ಕೂಟರ್ ಸಂಖ್ಯೆ KA20 EV6577 ಆಗಿದೆ. ಸ್ಕೂಟರ್ ಹಾಗೂ ಕಳ್ಳನ ಮಾಹಿತಿ ಸಿಕ್ಕಿದಲ್ಲಿ ಮೊಬೈಲ್ ಸಂಖ್ಯೆ 94813 64415 ಸಂಪರ್ಕಿಸುವಂತೆ ಕೊರಲಾಗಿದೆ.












