ಪ್ರತಿದಿನ ಒಂದು ಸೇಬು ಹಣ್ಣನ್ನು ತಿಂದು ವೈದ್ಯರಿಂದ ದೂರವಿರಿ ಎಂಬ ಮಾತನ್ನು ಕೇಳಿರುತ್ತೇವೆ. ಸೇಬುಹಣ್ಣಿನಲ್ಲಿ ಜೀವಸತ್ವಗಳು, ಆಂಟಿ-ಆಕ್ಸಿಡೆಂಟ್ ಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ಗಳು, ಮೆಗ್ನೀಸಿಯಮ್, ಕ್ಯಾಲ್ಸಿಯಂ, ವಿಟಮಿನ್ ಸಿ ಮತ್ತು ಕೆ ಗಳಂತಹ ಸೇರಿದಂತೆ ಅನೇಕ ಪೋಷಕಾಂಶಗಳಿವೆ. ಇಷ್ಟೆಲ್ಲಾ ಅಂಶಗಳಿರುವ ಸೇಬು ಹಣ್ಣನ್ನು ಯಾವಾಗ ಸೇವಿಸಬೇಕು ಎಂಬುದನ್ನು ನಾವು ತಿಳಿದಿರಬೇಕು.
ಸೇಬು ಹಣ್ಣನ್ನು ರಾತ್ರಿ ಮಲಗುವ ಮೊದಲು ಸೇವಿಸಬಾರದು. ಬದಲಾಗಿ ಹಣ್ಣನ್ನು ಹಗಲಿನಲ್ಲಿ ಸೇವಿಸುವುದು ದೇಹಕ್ಕೆ ಉತ್ತಮ. ಹಾಗೇ ಹಸಿವಾಯಿತೆಂದು ಸೇಬು ಹಣ್ಣನ್ನು ತಿನ್ನಬಾರದು. ಸೇಬುಹಣ್ಣನ್ನು ಯಾವಾಗಲೂ ತುಂಬಿದ ಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.
ಕೆಲವರು ಸೇಬು ಹಣ್ಣು ತಿನ್ನುವಾಗ ಹಣ್ಣಿನ ಸಿಪ್ಪೆ ತೆಗೆದು ತಿನ್ನುತ್ತಾರೆ. ಆದರೆ ಸಿಪ್ಪೆಯಲ್ಲಿ ಫೈಬರ್ ಅಂಶವು ಹೇರಳವಾಗಿದ್ದು, ಇದು ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ.
ಸೇಬು ಹಣ್ಣಿನಲ್ಲಿ ಕೆಫಿನ್ ಅಂಶ ಇರುವುದರಿಂದ ಇದು ದೇಹದ ತೂಕವನ್ನು ನಿಯಂತ್ರಣದಲ್ಲಿರಿಸುತ್ತದೆ. ದಿನಕ್ಕೆ ಒಂದು ಅಥವಾ ಎರಡು ಹಣ್ಣು ಮಾತ್ರ ಸೇವಿಸಬೇಕು. ಇದಕ್ಕಿಂತ ಹೆಚ್ಚು ಸೇಬು ಹಣ್ಣನ್ನು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಹಣ್ಣುಗಳನ್ನು ಸೇವಿಸುವ ಮೊದಲು ಅರ್ಧ ಗಂಟೆ ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿಟ್ಟು ಸೇವನೆ ಮಾಡುವುದು ಹೆಚ್ಚು ಪರಿಣಾಮಕಾರಿ.