ಬೆಂಗಳೂರು: ಕೋವಿಡ್ ಹೆಚ್ಚಳದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ವಿಧಿಸಲಾಗಿದ್ದ ನೈಟ್ ಕರ್ಪ್ಯೂ ಅನ್ನು ರದ್ದುಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಜ.31 ರ ಬಳಿಕ ನೈಟ್ ಕರ್ಫ್ಯೂ ರದ್ದಾಗಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಚ್ಚಿದ ಶಾಲೆಗಳನ್ನು ಇನ್ನು ತೆರೆಯಬಹುದು ಎಂದು ರಾಜ್ಯ ಸರ್ಕಾರ ಸೂಚಿಸಿದೆ.
ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತಜ್ಞರು, ಅಧಿಕಾರಿಗಳು ಮತ್ತು ಸಚಿವರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಜಾತ್ರೆ, ಪ್ರತಿಭಟನೆ, ರ್ಯಾಲಿಗಳಿಗೆ ನಿರ್ಬಂಧ ಮುಂದುವರಿಕೆ
ಮಂದಿರ – ಚರ್ಚ್- ಮಸೀದಿಗಳಲ್ಲಿ ಸೇವೆ ಪುನರಾರಂಭ
ಕಚೇರಿಗಳಲ್ಲಿ ಶೇ100 ರಷ್ಟು ಉದ್ಯೋಗಿಗಳಿಗೆ ಅವಕಾಶ
ಚಿತ್ರ ಮಂದಿರ, ಈಜುಕೊಳ, ಜಿಮ್ ಗಳಲ್ಲಿ ಶೇ.50 ಮಂದಿಗೆ ಅವಕಾಶ
ಮಹಾರಾಷ್ಟ್ರ, ಗೋವಾ ಮತ್ತು ಕೇರಳದಿಂದ ಬರುವ ಪ್ರಯಾಣಿಕರಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ
ಹೋಟೆಲ್, ಪಬ್, ಬಾರ್, ರೆಸ್ಟೋರೆಂಟ್ ತೆರೆಯಲು ಅವಕಾಶ
ಒಳಾಂಗಣ ಮದುವೆಗೆ 200 ಜನ, ಹೊರಾಂಗಣ ಮದುವೆಗಳಿಗೆ 300 ಜನರಿಗೆ ಅವಕಾಶ.