ಬೆಂಗಳೂರು: ಬೆಂಗಳೂರು, ಮಂಗಳೂರು ಮತ್ತು ಮೈಸೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಿರುವ ಆತಂಕಕಾರಿ ಮಾಹಿತಿ ಹೊರ ಬಿದ್ದಿದೆ.
ದಕ್ಷಿಣಭಾರತದ 10 ವಾಯುಮಾಲಿನ್ಯ ಪೀಡಿತ ನಗರಗಳ ಪಟ್ಟಿಯಲ್ಲಿ ರಾಜ್ಯದ ಮೂರು ನಗರಗಳು ಸ್ಥಾನ ಪಡೆದಿವೆ. ಪರಿಸರ ಕಾಳಜಿ ಕುರಿತು ಜಾಗೃತಿ ಮೂಡಿಸುವ ಸಂಸ್ಥೆ ಗ್ರೀನ್ ಪೀಸ್ ಇಂಡಿಯಾ ಈ ಮಾಹಿತಿಯನ್ನು ಹೊರಗೆಡವಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿದ ಅಧ್ಯಯನ ವರದಿಯನ್ನು ಗ್ರೀನ್ ಪೀಸ್ ಸಂಸ್ಥೆ ಉಲ್ಲೇಖಿಸಿದೆ.