ಕಾರ್ಕಳ: ಕಾರ್ಕಳ ಜೋಡು ರಸ್ತೆಯ ಹತ್ತಿರ ಇರುವ ಪೂರ್ಣಿಮಾ ಸಿಲ್ಕ್ಸ್ ಗೆ ಕೇಮಾರು ಮಠದ ಈಶ ವಿಠಲದಾಸ ಸ್ವಾಮೀಜಿಯವರು ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪೂರ್ಣಿಮಾ ಸಿಲ್ಕ್ಸ್ ನ ಪಾಲುದಾರರಾದ ರವಿಪ್ರಕಾಶ್ ಪ್ರಭು, ಕಿರಣಾ ರವಿಪ್ರಕಾಶ್ ಪ್ರಭು, ಪ್ರಜ್ವಲ್ ಪ್ರಭು ಅವರು ಶ್ರೀಗಳಿಗೆ ಶಾಲು ಹೊದಿಸಿ ಹೂ ಫಲಪುಷ್ಪ ನೀಡಿ ಸನ್ಮಾನಿಸಿದರು.
ಶ್ರೀಗಳು ಕೊಲ್ಲೂರು ಶ್ರೀ ಮೂಕಾಂಬಿಕ ದೇವಿಯ ಆಶೀರ್ವಾದ ದಿಂದ ಪೂರ್ಣಿಮಾ ಸಿಲ್ಕ್ಸ್ ನ ಇನ್ನೊಂದು ನೂತನ ಶಾಖೆ ಪೂರ್ಣಿಮಾ ಲೈಫ್ ಸ್ಟೈಲ್ ಪ್ರೈಮ್ ಮಾಲ್ ಕಟ್ಟಡದ ಅತೀ ಶೀಘ್ರದಲ್ಲಿ ಶುಭಾರಂಭಗೊಂಡು ಜೋಡು ರಸ್ತೆಯಲ್ಲಿನ ಅವಳಿ ಜವಳಿ “ಪೂರ್ಣಿಮಾ” ಸಂಸ್ಥೆ ಗಳಲ್ಲಿ ಹಲವಾರು ಜನರಿಗೆ ಉದ್ಯೋಗಾವಕಾಶ ದೊರಕಲಿ ಹಾಗೂ ಗ್ರಾಹಕರು ಸಂತೃಪ್ತರಾಗುವಂತೆ ಸೇವೆ ನಿಡು ವಂತಗಲಿ. ಪೂರ್ಣಿಮಾ ಆಡಳಿತ ವರ್ಗದವರಿಗೆ, ಗ್ರಾಹಕರಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಶುಭಹಾರೈಸಿದರು.
ಕುಂದಾಪುರ ಸಹನಾ ಗ್ರೂಪನ ನಿರ್ದೇಶಕರಾದ ಶ್ರೀ ಸುರೇಂದ್ರ ಶೆಟ್ಟಿಯವರು ಉಪಸ್ಥಿತರಿದ್ದರು.