ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿದೆ ನೌಕರಿ :ಈಗಲೇ ಅರ್ಜಿ ಸಲ್ಲಿಸಿ

ಮಂಗಳೂರು: ವಿಶ್ವವಿದ್ಯಾಲಯದಲ್ಲಿ(Mangalore University) ಅನೇಕ ಹುದ್ದೆಗಳು ಖಾಲಿ ಇದ್ದು, ಅರ್ಜಿ ಆಹ್ವಾನಿಸಲಾಗಿದೆ. ವಿವಿಧ ಲ್ಯಾಬ್, ಲೈಬ್ರರಿ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಫೆಬ್ರವರಿ 4ರಂದು ನಡೆಯುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ mangaloreuniversity.ac.in ಗೆ ಭೇಟಿ ನೀಡಬಹುದು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ಲ್ಯಾಬ್​ ಅಸಿಸ್ಟೆಂಟ್
ಲೈಬ್ರರಿ ಅಸಿಸ್ಟೆಂಟ್
ಎ/ಸಿ ಮೆಕ್ಯಾನಿಕ್
ಪ್ಲಂಬರ್

ವಿದ್ಯಾರ್ಹತೆ:
ಲ್ಯಾಬ್​ ಅಸಿಸ್ಟೆಂಟ್- ಬಿಎಸ್ಸಿ
ಲೈಬ್ರರಿ ಅಸಿಸ್ಟೆಂಟ್- ಪಿಯುಸಿ, ಡಿಪ್ಲೋಮಾ
ಎ/ಸಿ ಮೆಕ್ಯಾನಿಕ್-ಪಿಯುಸಿ
ಪ್ಲಂಬರ್- ಎಸ್​ಎಸ್​ಎಲ್​ಸಿ

ವಯೋಮಿತಿ:
ಮಂಗಳೂರು ವಿಶ್ವವಿದ್ಯಾನಿಲಯದ ಅಧಿಕೃತ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 38 ವರ್ಷ ಇರಬೇಕು.